ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣದ ಸತ್ಯಶೋಧನೆಗೆ ತೆರಳಿದ ಬಿಜೆಪಿ ನಾಯಕರಿಗೆ ಶಾಕ್

ಮೈಸೂರು;ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣದ ಸತ್ಯಶೋಧನೆಗೆ ತೆರಳಿದ ಬಿಜೆಪಿಗೆ ಶಾಕ್ ಆಗಿದೆ.

ಹತ್ಯೆ ಆರೋಪಿಗಳಲ್ಲಿ ಒಬ್ಬ ಬಿಜೆಪಿ ಕಾರ್ಪೊರೇಟರ್‌ ಓರ್ವನ ಸಹೋದರನಾಗಿರುವುದು ತಿಳಿದು ಬಂದಿದೆ.

ಹನುಮ ಜಯಂತಿ ಸಮಯದಲ್ಲಿ ದೇವರ ಬಳಿ ಪುನೀತ್‌ ರಾಜ್‌ಕುಮಾರ್‌ ಫೋಟೋ ಇಟ್ಟಿದ್ದಕ್ಕೆ ವೇಣುಗೋಪಾಲ್‌ ಆಕ್ಷೇಪ ವ್ಯಕ್ತಪಡಿಸಿ ಫೋಟೋ ತೆಗೆಸಿದ್ದರು. ಈ ಕಾರಣಕ್ಕೆ ಕೆಲವು ಸ್ನೇಹಿತರೇ ವೇಣುಗೋಪಾಲ್‌ನನ್ನು ಸಂಧಾನಕ್ಕೆಂದು ಕರೆಸಿಕೊಂಡು ಹತ್ಯೆ ನಡೆಸಿದ್ದರು ಎನ್ನಲಾಗಿದೆ.

ಪ್ರಕರಣದ ನಾಲ್ಕನೇ ಆರೋಪಿ ಶಂಕರ್‌ ಅಲಿಯಾಸ್‌ ತುಪ್ಪಾ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂದು ತಿಳಿದುಬಂದಿದೆ.

ವೇಣುಗೋಪಾಲ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ, ಮಾಜಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ್, ಮಾಜಿ ಶಾಸಕರಾದ ಎನ್. ಮಹೇಶ್, ಪ್ರೀತಮ್ ಗೌಡ ಮುಂತಾದವರು ಭೇಟಿ ಕೊಟ್ಟಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ.ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದ ಪ್ರಕರಣ ಬಿಜೆಪಿಗೆ ಶಾಕ್ ನೀಡಿದೆ ಎನ್ನಲಾಗಿದೆ.

ಟಾಪ್ ನ್ಯೂಸ್