ಯೋಗಿ ಆದಿತ್ಯನಾಥ್ ನಾಳೆ ಬಿಸಿ ರೋಡ್ & ಪುತ್ತೂರಿನಲ್ಲಿ ರೋಡ್ ಶೋ; ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಬಂಟ್ವಾಳ; ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಳೆ ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ
ಮತ್ತು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ‌.

ಯೋಗಿ ಆಗಮನದ ಹಿನ್ನೆಲೆ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಯೋಗಿ ಆದಿತ್ಯನಾಥ್ ಅವರು ಬಂಟ್ವಾಳ ತಾಲೂಕು ಶಾಂತ ಜಿ ಮೇಲಾಂಟ ಇವರ ಬಸ್ತಿಪಡು ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದಾರೆ.

ವಾಹನ ಸಂಚಾರಕ್ಕೆ ರಸ್ತೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಮಧ್ಯಾಹ್ನ 12.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳನ್ನು ಬಂಟ್ವಾಳ ತುಂಬೆ ಜಂಕ್ಷನ್(ಮೂಡಬಿದ್ರೆ ಕ್ರಾಸ್) ನಿಂದ ಸ್ವರ್ನಾಡು-ಮೂಲರಪಟ್ನ-ಸೂರಲ್ಪಾಡಿ-ಗುರುಪುರ ಕೈಕಂಬ ಮೂಲಕ ಮಂಗಳೂರು ಕಡೆಗೆ ತೆರಳುವುದು.

ಮಂಗಳೂರುನಿಂದ ಬೆಂಗಳೂರು ಕಡೆಗೆ ತೆರಳುವ ವಾಹನಗಳನ್ನು ಪಂಪ್‌ ವೆಲ್ ನಿಂದ ತೊಕ್ಕಟ್ಟು-ಮುಡಿಸು-ಮೆಲ್ಕಾರ್- ಮಾರ್ಗದ ಮೂಲಕ ಬೆಂಗಳೂರು ಕಡೆಗೆ ಸಂಚರಿಸುವುದು ಮಂಗಳೂರುನಿಂದ ಬೆಳ್ತಂಗಡಿಗೆ ತೆರಳುವ ವಾಹನಗಳನ್ನು ಗುರುಪುರ ಕೈಕಂಬ-ಸೂರಲ್ಪಾಡಿ- ಮೂಲರಪಟ್ನ-ಸ್ವರ್ನಾಡು ಮೂಲಕ ಬೆಳ್ತಂಗಡಿಗೆ ತೆರಳುವುದು.

ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್, ಮುಡಿಪು ತೊಕ್ಕೊಟ್ಟು ಮೂಲಕ ಮಂಗಳೂರಿಗೆ ತೆರಳುವುದು.
ಈ ಸಂಚಾರ ಬದಲಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಇದೇ ರೀತಿ ಪುತ್ತೂರಿಗೆ ಕೂಡ ಯೋಗಿ ಆದಿತ್ಯನಾಥ್ ಭೇಟಿ ನೀಡಲಿದ್ದು, ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com