ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಆಡಳಿತ, ಹಿಂದೂಗಳ ಬಗ್ಗೆ ಮಾತಾಡಿದರೆ ಎನ್​ಕೌಂಟರ್- ಯತ್ನಾಳ್ ಏನೆಲ್ಲಾ ಹೇಳಿದ್ರು?

ಹುಬ್ಬಳ್ಳಿ; ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕುಂದಗೋಳದ ಹಿರೇಹರಕುಣಿ ಗ್ರಾಮದಲ್ಲಿ ಮಾತನಾಡಿದ ಯತ್ನಾಳ್,ಕ್ವಾಂಯ್ಕ್ ಅಂದ್ರೆ ಎನ್ ಕೌಂಟರ್, ಭಾರತದ ವಿರುದ್ಧ ಮಾತಾಡಿದ್ರೆ ಢಂ ಢಂ, ರೋಡ್ ಮೇಲೆಯೇ ಡಿಷ್ಕ್ಯಾಂ.. ಮುಂದೆ ರಾಜ್ಯದಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿಯ ಯೋಗಿ ಮಾದರಿ ಜಾರಿಗೆ ಬರಲಿದೆ ಎಂದು ಹೇಳಿದರು.

ಯುಪಿಯಲ್ಲಿ ಇಬ್ಬರು ಅಣ್ಣತಮ್ಮಂದಿರ ಎನ್ ಕೌಂಟರ್ ಆಯ್ತು.ಹೀಗಾಗಿ ಕೆಲವರು ಜೈಲಿನಿಂದ ಹೊರಗೆ ಬರೋಕು ಹೆದರುತ್ತಿದ್ದಾರೆ.ಯುಪಿಯಲ್ಲಿ ವಾಹನಗಳು ಪಲ್ಟಿಯಾಗುತ್ತಲೆ ಇರುತ್ತವೆ.ರೌಡಿಗಳ ಹರಣವಾಗುತ್ತಲೇ ಇರುತ್ತದೆ. ಹಂಗೆ ಕರ್ನಾಟಕದಲ್ಲಿ ಯಾರಾದ್ರೂ ಹಾರಾಡಿದ್ರೆ ಎನ್ ಕೌಂಟರ್ ಖಚಿತ. ಹಿಂದೂಗಳ ಬಗ್ಗೆ, ದೇಶದ ಬಗ್ಗೆ ಮಾತಾಡಿದ್ರೆ ಢಂ ಢಂ ಖಚಿತ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಲ್ಲು ಹೊಡೆಯುವ ನಾಯಿಗಳೆಲ್ಲಾ ಗಪ್ ಆಗಿವೆ. ಪಾಕಿಸ್ತಾನದ ಪರ ಘೋಷಣೆ ಕೂಗ್ತಿದ್ದ ಹಂದಿಗಳೆಲ್ಲಾ ಸುಮ್ಮನಾಗಿವೆ. ಮೊದಲು ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಿದ್ದರು. 370 ಕಲಂ ವಾಪಸ್ ಪಡೆದ ನಂತರ ಎಲ್ಲರ ಸದ್ದಡಗಿದೆ. ದೇಶದ ಈ ಸ್ಥಿತಿಗೆ ಜವಹರಲಾಲ್ ನೆಹರೂ ಕಾರಣ. ನೆಹರೂ ಮಾಡಿದ ತಪ್ಪಿನಿಂದ ಭಾರತಕ್ಕೆ ಈ ಪರಿಸ್ಥಿತಿ ಬಂದಿದೆ. ಸ್ವಾರ್ಥಕ್ಕಾಗಿ ಕಾಶ್ಮೀರಕ್ಕೆ 370 ವಿಶೇಷ ಸ್ಥಾನಮಾನ‌ ಕಲ್ಪಿಸಿ ಕೊಟ್ಟರು. ಅರ್ಧ ಕಾಶ್ಮೀರ ಪಾಕಿಸ್ತಾನಕ್ಕೆ, ಮತ್ತರ್ಧ ಕಾಶ್ಮೀರ ಭಾರಕ್ಕೆ ಹೋಯಿತು ಎಂದು ಹೇಳಿದರು.

ಇದೇ ವೇಳೆ ಟಿಪ್ಪು ಸುಲ್ತಾನ್ , ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಬಗ್ಗೆಯೂ ಯತ್ನಾಳ್ ವಿವಾದಾತ್ಮಕವಾಗಿ ಹೇಳಿಕೆಯನ್ನು‌ ನೀಡಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com