ಕುಕ್ಕರ್ ಹಾಗೂ ಇಸ್ತ್ರಿಪೆಟ್ಟಿಗೆ ಹಂಚಿಕೆ ಸುದ್ದಿ ಬಗ್ಗೆ ಸಿದ್ದರಾಮಯ್ಯ ಪುತ್ರ, ವರುಣ ಕ್ಷೇತ್ರದ ಆಶ್ರಮ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಹೇಳಿರುವುದೇ ಒಂದು, ಸಾಮಾಜಿಕ ಮಾಧ್ಯಮ-ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತಿರುವುದೇ ಒಂದು. ನನ್ನ ಹೇಳಿಕೆ ಆ ರೀತಿಯ ಅರ್ಥ ಕೊಟ್ಟಿರಲೂಬಹುದು. ಆದರೆ, ಚುನಾವಣೆಗೋಸ್ಕರ ಸಿದ್ದರಾಮಯ್ಯ ಕುಕ್ಕರ್ ಕೊಟ್ಟಿದ್ದಾರೆ ಎಂದಿಲ್ಲ ಎಂದರು.
ಕುಕ್ಕರ್ ವಿತರಣೆಯನ್ನು ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಗೂ ಮುನ್ನವೇ ಮಾಡಲಾಗಿದೆ. ಜ.26ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ವಿತರಿಸಲಾಗಿದೆ. ಆ ಕಾರ್ಯಕ್ರಮದ ವಿಡಿಯೊ ಹಾಗೂ ಫೋಟೊಗಳಿವೆ.
ತಂದೆ ಸ್ವತಃ ಕೈಯಿಂದ ಕೊಟ್ಟಿಲ್ಲ. ಆದರೆ, ಚುನಾವಣೆಗಾಗಿ ಕುಕ್ಕರ್ ಮತ್ತು ಇಸ್ತ್ರಿಪೆಟ್ಟಿಗೆಗಳನ್ನು ಹಂಚಲಾಗಿದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. ತಂದೆ ಅವರ ಕೈಯಿಂದ ದುಡ್ಡು ಕೊಟ್ಟು ಎಲ್ಲಿಯೂ ಹಂಚಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.