ಆ್ಯಂಟಿ ಕಮ್ಯುನಲ್ ವಿಂಗ್ ನಿಂದ ಭಯದ ವಾತಾವರಣ- ಶಾಸಕ ಯಶ್ ಪಾಲ್ ಸುವರ್ಣ ಏನೆಲ್ಲಾ ಹೇಳಿದ್ರು?

ಉಡುಪಿ:ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ,ಸರಕಾರ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ

ಮಾದ್ಯಮದ ಜೊತೆ ಮಾತನಾಡಿದ ಅವರು, ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳ ಪೋಷಕರು ಕೂಡಾ ಮಕ್ಜಳನ್ನು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಕಳುಹಿಸಲು ಆತಂಕಿತರಾಗಿದ್ದಾರೆ. ಆ್ಯಂಟಿ ಕಮ್ಯನಲ್ ವಿಂಗ್ ಸ್ಥಾಪಿಸಿದಾಗ ಮೊದಲು ಸ್ವಾಗತ ಕೋರಿದವರು ಎಸ್ ಡಿ ಪಿ ಐ ನವರು ಎಂದು ಹೇಳಿದ್ದಾರೆ‌.

ಈ ವಿಂಗ್ ನ ಚೌಕಟ್ಟಿನಲ್ಲಿ ಏನೆಲ್ಲಾ ಬರಲಿದೆ ಎಂದು ಸ್ವಷ್ಟಪಡಿಸಬೇಕು. ಮಂಗಳೂರಿಗೆ ಒಂದು ಒಳ್ಳೆಯ ಮಾಸ್ಟರ್ ಪ್ಲಾನ್ ರೂಪಿಸಿ ಅಭಿವೃದ್ಧಿ ಗೆ ಮಹತ್ವ ನೀಡಬೇಕು. ಒಂದು ಸಮುದಾಯಕ್ಕೆ ಓಲೈಕೆ ಮಾಡುವ ರೀತಿಯಲ್ಲಿ ಇದನ್ನು ಮಾಡಲಾಗಿದೆ. ಪಿಎಫ್ಐ , ಸಿಎಫ್ಐ ಬ್ಯಾನ್ ಆಗಿದೆ. ಆದರೆ ಬೇರೆ ಬೇರೆ ಹೆಸರಿನಲ್ಲಿ ಸಂಘಟನೆ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

ಪಠ್ಯ ಪುಸ್ತಕ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯಿದೆ ಬದಲಾವಣೆ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ.ಸರಕಾರ ಘೋಷಿಸಿದ 5 ಭಾಗ್ಯಗಳಿಗೆ ಯಾವ ಮೂಲದಿಂದ ಹಣ ಭರಿಸುತ್ತರೆ ಎಂಬ ಬಗ್ಗೆ ಸ್ವಷ್ಟತೆ ಇಲ್ಲ. ಜನರ ಮನಸ್ಸು ದಿಕ್ಕು ತಪ್ಪಿಸುವ ಹೇಳಿಕೆ ಗಳನ್ನು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತಾಂತರ ನಿ಼ಷೇದ ಕಾಯಿದೆಯನ್ನು ಹಿಂಪಡೆಯುವ ಹೇಳಿಕೆ ಮರುಪಡೆಯಬೇಕು. ದೇಶಕ್ಕೆ ಮಾರಕ ಇರುವ ಯಾವುದೇ ಕಾನೂನುನ್ನು ತರಬಾರದು. ವೋಟ್ ಬ್ಯಾಂಕ್ ಗೆ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದರು.

ಪಠ್ಯ ಪುಸ್ತಕದಲ್ಲಿ ದೇಶ ಭಕ್ತರ ವಿಚಾರ ಇದೆ. ನಮ್ಮೂರಿನ ವಿದ್ಯಾರ್ಥಿಗಳು ನಮ್ಮ ಊರಿನ ಬಗ್ಗೆ ತಿಳಿಯಬೇಕು. ಇದನ್ನು ಪ್ರತಿಭಟಿಸುತ್ತೇವೆ. ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಮುಂದುವರೆಸಬೇಕು. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ‌.

ಕೇಂದ್ರದ ಸಹಕಾರ ಇಲ್ಲದೆ ರಾಜ್ಯ ಸರಕಾರ ನಡೆಸಲು ಆಗುವುದಿಲ್ಲ. ಘೋಷಣೆ ಮಾಡುವ ಮುಂಚೆ ಕೇಂದ್ರ ಸರಕಾರದಲ್ಲಿ ಅಕ್ಕಿಯ ಲಭ್ಯತೆಯನ್ನು ಪಡೆದುಕೊಳ್ಳಬೇಕಿತ್ತು ಇದೇ ವೇಳೆ ಶಾಸಕರು ಹೇಳಿದ್ದಾರೆ.

ಟಾಪ್ ನ್ಯೂಸ್