ಮುಂಬೈ:ಆರ್‌ಎಸ್‌ಎಸ್ ಮಾಜಿ ಪ್ರಚಾರಕನ ವಿಡಿಯೋವೊಂದು ವೈರಲ್ ಆಗಿದ್ದು,ದೇಶದಾದ್ಯಂತ ಭಾರೀ ಸಂಚಲನವನ್ನು ಮೂಡಿಸಿದೆ.ಮುಸ್ಲಿಂ ಮಿರರ್, ಸಿಯಾಸತ್, ನಾಗ್ಫುರ್ ಟುಡೇ ಸೇರಿದಂತೆ ವಿವಿಧ ವೆಬ್ ಮಾದ್ಯಮಗಳು ಈ ಬಗ್ಗೆ ವರದಿ ಮಾಡಿದೆ.
ಮಹಾರಾಷ್ಟ್ರದ ಮುಂಬೈನಲ್ಲಿ ನಿವಾಸಿ ಆರಸ್ಸೆಸ್ ಮಾಜಿ ಪ್ರಚಾರಕ ಯಶವಂತ್ ಶಿಂಧೆ ವಿಡಿಯೋ ಹೇಳಿಕೆಯಲ್ಲಿ
ಆರ್‌ಎಸ್‌ಎಸ್ ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿತ್ತು ಎಂದು ಹೇಳಿರುವ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ಕುರಿತು ಯಶವಂತ್ ಶಿಂಧೆ ಅವರು ನಾಂದೇಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು,ಸ್ಫೋಟಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ತನ್ನ ಬಳಿ ಇರುವುದರಿಂದ ಪ್ರಕರಣದ ಸಾಕ್ಷಿಯಾಗಲು ಸಿದ್ಧ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಮಾಜಿ ಪ್ರಚಾರಕರನ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಮುಖ್ಯ ವಕ್ತಾರ ಪವನ್ ಖೇರಾ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಕುರಿತು ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಶವಂತ್ ಶಿಂಧೆ ಅವರು 1995 ರಿಂದ ವಿಶ್ವ ಹಿಂದೂ ಪರಿಷತ್,ಬಜರಂಗದಳ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸದಸ್ಯರಾಗಿದ್ದರು ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.
ನಾಂದೇಡ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಹಿಮಾಂಶು ಪಾನ್ಸೆ ಮತ್ತು ಇತರ 20 ಮಂದಿಯೊಂದಿಗೆ ತರಬೇತಿಗೆ ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.
ಹಿಮಾಂಶು ಪನ್ಸೆ ಅವರನ್ನು ಭೇಟಿಯಾಗಲು ನಾಂದೇಡ್‌ಗೆ ಹಲವು ಬಾರಿ ಹೋಗಿದ್ದು, ಹಾಗೆ ಮಾಡಬೇಡಿ ಎಂದು ಹೇಳಿದ್ದೆ ಎಂದು ಯಶವಂತ್ ಶಿಂಧೆ ಹೇಳಿದ್ದಾರೆ.ಬಿಜೆಪಿಯ ಗೆಲುವಿಗಾಗಿ ಆರೆಸ್ಸೆಸ್ ಈ ಸ್ಫೋಟಗಳನ್ನು ಮಾಡಿದೆ ಎಂದು ಯಶವಂತ್ ಶಿಂಧೆ ಆರೋಪಿಸಿದ್ದಾರೆ.
राष्ट्रीय स्वयंसेवक संघ के प्रचारक रहे यशवंत शिंदे ने हलफ़नामा दर्ज कर के संघ के राष्ट्र विरोधी कारनामों की ख़ौफ़नाक जानकारी उजागर की। कैसे पूरे देश में बम विस्फोट करने का षड्यंत्र रचा गया, कौन कौन उसमें शामिल थे, इस से बड़ी ब्रेकिंग न्यूज़ और क्या हो सकती है? pic.twitter.com/aJYPeDiwGs
— Pawan Khera 🇮🇳 (@Pawankhera) September 1, 2022