ಕಾರ್ಕಳ:ಹುರ್ಲಾಡಿ ಎಂಬಲ್ಲಿ ದಂಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ದಂಪತಿಗಳ ನಡುವೆ ಜಗಳ ನಡೆದು ಮೊದಲು ಯಶೋಧಾ (32) ಕೆರೆಗೆ ಹಾರಿದ್ದರು.ಅದರ ಬೆನ್ನಲ್ಲೇ ಪತಿ ಇಮ್ಯಾನುಲ್ ಸಿದ್ಧಿ ಕೆರೆಗೆ ಹಾರಿ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.
ಆದರೆ ಇಬ್ಬರು ಕೂಡ ಅದೇ ಕೆರೆಯಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಇದೀಗ ಅನಾಥರಾಗಿದ್ದಾರೆ.
ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮುಂಬಯಿ ಹೋಟೆಲ್ ಉದ್ಯಮಿ ನಲ್ಲೂರು ಹುರ್ಲಾಡಿ ರಘುವೀರ್ ಶೆಟ್ಟಿ ಅವರ ತೋಟದ ಕೆಲಸಕ್ಕೆ ಬಂದಿದ್ದರು.
ಉತ್ತಮ ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಅಗ್ಗಿಂದಾಗೆ ಜಗಳ ನಡೆಯುತ್ತಿತ್ತು.
ಇಮ್ಯಾನುಲ್ ಸಿದ್ಧಿ ತನ್ನ ಪತ್ನಿಯಲ್ಲಿ ಮನೆಯಲ್ಲಿರುವ ಟಿ ವಿ ಮಾರಾಟದ ವಿಚಾರವನ್ನು ಮುಂದಿಟ್ಟಿದ್ದಾನೆ ಎನ್ನಲಾಗಿದೆ. ಅದಕ್ಕೆ ಪತ್ನಿ ಯಶೋಧ ಆಕ್ಷೇಪ ವ್ಯಕ್ತಪಡಿಸಿದಾಗ ಅವರೊಳಗೆ ಜಗಳ ನಡೆದಿದೆ.ತಕ್ಷಣ ಮನೆಯಿಂದ ಓಡಿ ಹೋದ ಯಶೋಧ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಪತ್ನಿಯ ಜೀವ ಕಾಪಾಡಲು ಅದೇ ಕೆರೆಗೆ ಹಾರಿ ಇಮ್ಯಾನುಲ್ ಸಿದ್ಧಿ ಪ್ರಯತ್ನಿಸಿ ಆತ ಕೂಡ ಅದೇ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.