ಹಳೆಯ ಅಂಬಾಸಿಡರ್ ಕಾರಿನಲ್ಲಿ ಮಗನ ನಾಮಪತ್ರ ಸಲ್ಲಿಕೆಗೆ ತೆರಳಿದ ಯಡಿಯೂರಪ್ಪ!; ಬಿಎಸ್ ವೈ ನಾಮಪತ್ರ ಸಲ್ಲಿಕೆಗೆ ಬಳಸುತ್ತಿದ್ದರು ಇದೇ ಕಾರು!

ಶಿವಮೊಗ್ಗ; ಮಗನ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಂತ್ರಿ ಯಡಿಯೂರಪ್ಪ ತಮ್ಮ ಹಳೆಯ ಅಂಬಾಸಿಡರ್ ಕಾರ್ ನಲ್ಲಿ ತೆರಳಿ ಸುದ್ದಿಯಾಗಿದ್ದಾರೆ.

ಮಗ ಬಿ ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಇಂದು ಅವರು ಹಿಂದೆ ಬಳಸುತ್ತಿದ್ದ ಹಳೆಯ ಅಂಬಾಸಿಡರ್ ಕಾರ್ ನಲ್ಲಿ ತೆರಳಿದ್ದಾರೆ.

ಯಡಿಯೂರಪ್ಪ ಅವರು ತಮ್ಮ ತೋಟದ ಮನೆಯಿಂದ ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಅಂಬಾಸಿಟರ್​ ಕಾರಿನಲ್ಲಿ ತೆರಳಿದರು.

ಬಿಎಸ್ ವೈ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬಳಸಿದಂತಹ ಅಂಬಾಸಿಡರ್ ಕಾರಿನಲ್ಲಿ ಮಗನ ನಾಮಪತ್ರ ಸಲ್ಲಿಕೆಗೆ ಹೊರಟಿದ್ದಾರೆ.ಇವರೊಂದಿಗೆ ಸಂಸದ ಬಿ ವೈ ರಾಘವೇಂದ್ರ ಹಾಗೂ ರಾಘವೇಂದ್ರ ಪತ್ನಿ ಬಿಎಸ್ ವೈ ಗೆ ಸಾಥ್ ನೀಡಿದ್ದಾರೆ.

ತಾವು ನಾಮಪತ್ರ ಸಲ್ಲಿಸುವಾಗ ಯಡಿಯೂರಪ್ಪ ಅವರು ಪ್ರತಿ ವೇಳೆಯೂ ಅಂಬಾಸಿಡರ್ ಬಳಸುತ್ತಿದ್ದರು. ಈ ಬಾರಿ ಮಗ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೂ ರಾಜಾಹುಲಿ ತಮ್ಮ ಅಂಬಾಸಿಟರ್ ಕಾರನ್ನೇ ಬಳಸಿ ಮತ್ತೆ ಸುದ್ದಿಯಾಗಿದ್ದಾರೆ.

ರಾಜ್ಯದ ಚುನಾವಣೆ ಕಣ ಕಾವೇರಿದೆ.ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದು, ನಿರೀಕ್ಷೆಯಂತೆ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com