ಕಲಬುರ್ಗಿ;ಜೇವರ್ಗಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಸಮಸ್ಯೆ ಎದುರಾಗಿತ್ತು.
ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ರದೇಶದ ಬಳಿ ಪ್ಲಾಸ್ಟಿಕ್ ಚೀಲಗಳು ಹಾಗೂ ತ್ಯಾಜ್ಯಗಳಿದ್ದ ಕಾರಣ ಹೆಲಿಕಾಪ್ಟರ್ ಹೆಲಿಪ್ಯಾಡ್ ಗೆ ಸಮೀಪಿಸುತ್ತಿದ್ದಂತೆ ಧೂಳು ಹಾಗೂ ಪ್ಲಾಸ್ಟಿಕ್
ಮೇಲಕ್ಕೆ ಹಾರಿದ್ದವು.ಇದರಿಂದ ಪೈಲೆಟ್ ಮತ್ತೆ ಹೆಲಿಕಾಪ್ಟರನ್ನು ಮೇಲಕ್ಕೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳು, ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಿದ ನಂತರ ಪೈಲಟ್ ಎರಡನೇ ಬಾರಿಗೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಆದರೇ ಮಾಜಿ ಸಿಎಂಗೆ ಸುರಕ್ಷಿತವಾಗಿ ಲ್ಯಾಂಡಿಂಗ್ ಗೆ ಅವಕಾಶ ಕಲ್ಪಿಸಬೇಕಾದ ಅಧಿಕಾರಿಗಳು ಮೊದಲೇ ಇದನ್ನು ಗಮನಿಸಿಲ್ವ ಎನ್ನುವ ಪ್ರಶ್ನೆ ಮೂಡಿದೆ.