ಭೀಕರ ಅಪಘಾತ; ಉರೂಸ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಐವರು ಮೃತ್ಯು, ಹಲವರಿಗೆ ಗಂಭೀರ ಗಾಯ

-ಮುನೀರ್​, ಮುದ್ದಸಿರ್, ನಯಮ್ತ್, ಮೀಜಾ ಮತ್ತು ಸುಮ್ಮಿ ಮೃತರು.

ಯಾದಗಿರಿ;ನಿಂತಿದ್ದ ಲಾರಿಗೆ ಕ್ರೂಸರ್​ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ 13 ಜನ ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದೆ.

ಮುನೀರ್​ (40), ನಯಮ್ತ್ ಉಲ್ಲಾ​ (40), ಮೀಜಾ (50), ಮುದ್ದಸಿರ್ (12) ಮತ್ತು ಸುಮ್ಮಿ (13) ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇವರು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲಗೋಡು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.

ಘಟನೆಯಲ್ಲಿ ಆಯಿಷಾ, ಅನಸ್, ಸುಹಾನಾ, ರಮೀಜಾ, ಮಸಿ ಉಲ್ಲಾ, ಸೀಮಾ, ರಿಯಾಜ್ ಉನ್ಬೀ, ಮುಜ್ಜು, ನಸೀಮಾ, ಮಾಶುಮ್ ಬಾಷಾ, ಮುಜಕೀರ್, ಹನೀಫಾ, ಸೋಹೆಲ್ ಸೇರಿದಂತೆ 13 ಜನರು ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನೆಲ್ಲ ರಾಯಚೂರಿನ ರಿಮ್ಸ್​ ಆಸ್ಪತ್ರೆಗೆ ರವಾನಿಸಲಾಗಿದೆ.

ಇವರು ಆಂದ್ರದಿಂದ ಕಲಬುರುಗಿಯಲ್ಲಿ ನಡೆಯುತ್ತಿರುವ ದರ್ಗಾ ಉರುಸ್​ ಗೆ ತೆರಳುತ್ತಿದ್ದರು. ಈ ವೇಳೆ, ನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್​ ವಾಹನ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸುತ್ತಿದ್ದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣಾ ಕೆಲಸ ಮಾಡಿದ್ದಾರೆ.

ಲಾರಿ ಚಾಲಕನಿಗೆ ನಿದ್ದೆ ಬಂದ ಹಿನ್ನೆಲೆ ಆತ ತನ್ನ ವಾಹನವನ್ನು ರಸ್ತೆ ಬಿಟ್ಟು ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಕ್ರೂಸರ್​ ವಾಹನ ಚಾಲಕ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಟಾಪ್ ನ್ಯೂಸ್