ಕೊಪ್ಪಳ:ಬಸ್ ನಿಲ್ಲಿಸದ ಕಾರಣ ಮಹಿಳೆಯೊಬ್ಬರು ಸರಕಾರಿ ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ವರದಿಯಾಗಿದೆ.
ಇಳಕಲ್ ಪಾಪನಳ್ಳಿ ನಿವಾಸಿ ಲಕ್ಷ್ಮಿ ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ವೇಗದೂತ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು.
ಬಸ್‌ನ ಚಾಲಕ ಕಲ್ಲು ಎಸೆದ ಮಹಿಳೆಯನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರು ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆ, ನನ್ನ ಮುಂದೆ ಹಲವು ಬಸ್‌ಗಳು ಹೋಗಿದೆ.ಯಾರೂ ಕೂಡ ನಿಲ್ಲಿಸಿಲ್ಲ.ಮಳೆ ಕೂಡ ಬರುತ್ತಿತ್ತು.ಇಳಕಲ್‌ಗೆ ಹೋಗುವ ಬಸ್‌ಗಾಗಿ ಮಳೆಯಲ್ಲಿ ನಾಲ್ಕೈದು ತಾಸು ಕಾದು ಕುಳಿತಿದ್ದೆ.ಇದರಿಂದ ಕೋಪಗೊಂಡು ಕಲ್ಲು ಎಸೆದಿರುವುದಾಗಿ ಹೇಳಿದ್ದಾರೆ.