ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂತಿಮವಾಗಿ ಅಂಗೀಕಾರವಾಯಿತು.
ಮಹಿಳಾ ಮೀಸಲಾತಿ ಮಸೂದೆ ಪರವಾಗಿ 454 ಮತಗಳು ಚಲಾವಣೆಯಾದವು.ಇದರ ವಿರುದ್ಧ ಕೇವಲ 2 ಮತಗಳು ಚಲಾವಣೆಯಾದವು.
ಮಸೂದೆಗೆ ಎಐಎಂಐಎಂ ವಿರೋಧವನ್ನು ವ್ಯಕ್ತಪಡಿಸಿದೆ. ಮಸೂದೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಒಬಿಸಿ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಎಂದು ಹೇಳಿದ್ದರು.
ಅಸಾದುದ್ದೀನ್ ಓವೈಸಿ ಮತ್ತು ಇನ್ನೋರ್ವ ಸಂಸದ ಸೈಯದ್ ಇಮ್ತಿಯಾಜ್ ಜಮೀಲ್ ಮಸೂದೆ ವಿರುದ್ಧ ಮತಚಲಾಯಿಸಿದ್ದಾರೆ.
ಅಸಾದುದ್ದೀನ್ ಓವೈಸಿ ಈ ಹಿಂದೆಯೇ ಮಸೂದೆಯನ್ನು ವಿರೋಧಿಸಿದ್ದರು. ಇದರಲ್ಲಿ ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಏಕೆ ಅವಕಾಶ ಕಲ್ಪಿಸಿಲ್ಲವೆಂದು ಅವರು ಪ್ರಶ್ನಿಸಿದರು.
ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ತೀರಾ ಕಡಿಮೆ. ದೇಶದಲ್ಲಿ ಶೇ.7ರಷ್ಟು ಮುಸ್ಲಿಂ ಮಹಿಳೆಯರಿದ್ದಾರೆ, ಆದರೆ ಈ ಸದನದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ.0.7ರಷ್ಟಿದೆ ಎಂದು ಓವೈಸಿ ಹೇಳಿದ್ದಾರೆ.