ಮೀನು ತಿಂದ ಬಳಿಕ ಅಸ್ವಸ್ಥಳಾದ ಮಹಿಳೆ; ಅಂಗಾಂಗಗಳು ನಿಷ್ಕ್ರಿಯ!

ಮೀನು ತಿಂದ ಬಳಿಕ ಅಸ್ವಸ್ಥಳಾದ ಮಹಿಳೆ;ಅಂಗಾಂಗಗಳು ನಿಷ್ಕ್ರಿಯ!

ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಮೀನು ತಿಂದು ತನ್ನ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ನಡೆದಿದೆ.

ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್‌ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆ ಬಳಿಕ ಮಹಿಳೆ ಅಂಗಾಂಗವನ್ನು ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ

ಲಾರಾ ಬರಾಜಾಸ್(40) ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ ಮತ್ತು ಮನೆಯಲ್ಲಿ ತಯಾರಿಸಿದ ಮೀನಿನ ಖಾದ್ಯಗಳನ್ನು ತಿಂದ ನಂತರ ಬರಜಾಸ್ ಅಸ್ವಸ್ಥಗೊಂಡಿದ್ದಾಳೆ ಎಂದು ಮೆಸ್ಸಿನಾ ಎನ್ನುವವರು ತಿಳಿಸಿದ್ದಾರೆ.

ಮೀನಿನ ಸೇವನೆ ಬಳಿಕ ಅವಳ ಬೆರಳುಗಳು ಕಪ್ಪು, ಪಾದಗಳು, ತುಟಿಗಳು ಕಪ್ಪಾಗಿದ್ದವು. ಆಕೆ ಸಂಪೂರ್ಣವಾಗಿ ಸೆಪ್ಸಿಸ್ ಹೊಂದಿದ್ದರು. ಅವರ ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಮೆಸ್ಸಿನಾ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಕಚ್ಚಾ ಸಮುದ್ರಾಹಾರ ಮತ್ತು ಸಮುದ್ರದ ನೀರಿನಲ್ಲಿ ಕಂಡುಬರುವ ಸಂಭಾವ್ಯ ಮಾರಣಾಂತಿಕ ಬ್ಯಾಕ್ಟೀರಿಯ ‘ವಿಬ್ರಿಯೊ ವಲ್ನಿಫಿಕಸ್’ ಬರಜಾಸ್ ಅವರ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಮೀನುಗಳನ್ನು ಸರಿಯಾಗಿ ಬೇಯಿಸದೆ ತಿಂದ ಕಾರಣ ಅವರಿಗೆ ಈ ರೀತಿ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ‌.

ಟಾಪ್ ನ್ಯೂಸ್