ಮಹಿಳೆಯೋರ್ವರು ಬರೊಬ್ಬರಿ ಐದು ಮಕ್ಕಳಿಗೆ ಏಕಲಕಾಲದಲ್ಲಿ ಜನ್ಮ ನೀಡಿ ಸುದ್ದಿಯಾಗಿದ್ದಾರೆ.
ಪೋಲೆಂಡ್ ನಲ್ಲಿ 37 ವರ್ಷದ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.ಅವರಿಗೆ ಮೊದಲು 7 ಮಕ್ಕಳಿದ್ದರು.
ಡೊಮಿನಿಕಾ ಕ್ಲಾರ್ಕ್ ತನ್ನ ಗರ್ಭಧಾರಣೆಯ 28 ನೇ ವಾರದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.ಮೂವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಹುಟ್ಟಿದ ಎಲ್ಲಾ ಮಕ್ಕಳ ತೂಕ 710 ರಿಂದ 1400 ಗ್ರಾಂ ಇದ್ದು ಶಿಶುಗಳ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.