ಮಕ್ಕಳ ಎದುರೇ ಸಮುದ್ರ ಪಾಲಾದ ಮಹಿಳೆ; ವಿಡಿಯೋ ವೈರಲ್..

ಮಕ್ಕಳ ಎದುರೇ ಸಮುದ್ರ ಪಾಲಾದ ಮಹಿಳೆ; ವಿಡಿಯೋ ವೈರಲ್..

ಮುಂಬೈ;ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಮಕ್ಕಳ ಎದುರೇ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ಘಟನೆ ನಡೆದಿದೆ.

ಈ ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಹಿಳೆಯನ್ನು ಜ್ಯೋತಿ ಸೋನಾರ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಮುಖೇಶ್ ಸೋನಾರ್ ಮತ್ತು ಅವರ ಮಕ್ಕಳ ಎದುರೇ ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಜುಲೈ 9 ರಂದು ಈ ದುರಂತ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮಹಿಳೆ ತನ್ನ ಪತಿಯೊಂದಿಗೆ ಸಮುದ್ರದ ಕಲ್ಲಿನ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆಗ ಸಮುದ್ರದ ದೊಡ್ಡ ಅಲೆಯೊಂದು ಅವರಿಗೆ ಅಪ್ಪಳಿಸಿದೆ. ಈ ವೇಳೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ಅವರ ಮಗು ಮಮ್ಮಿ..ಮಮ್ಮಿ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕೇಳುತ್ತದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು