ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ; ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು:ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ

ರಘು ಮತ್ತು ಮುರುಳಿ ಬಂಧಿತ ಆರೋಪಿಗಳು.

ಆ.5 ರಂದು ರಘು ಮತ್ತು ಮುರುಳಿ ಬೈಕ್​​ನಲ್ಲಿ ಕಾರೊಂದನ್ನು ಹಿಂಬಾಲಿಸಿಕೊಂಡು ಬಂದಿದ್ದರು.ವೈಟ್​ ಫಿಲ್ಡ್​​ನ ಸಿದ್ದಾಪುರ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನ ಬಳಿ ಬಂದು ಚಾಲಕನಿಗೆ ಕಾರಿನಿಂದ ಕೆಳೆಗೆ ಇಳಿಯಲು ಹೇಳಿದ್ದರು.

ಚಾಲಕ ಕೆಳೆಗೆ ಇಳಿಯದಿದ್ದಾಗ ಕಲ್ಲಿನಿಂದ ಕಾರಿನ ಗಾಜನ್ನು ಒಡೆಯಲು ಯತ್ನಿಸಿದ್ದರು.ನಂತರ ವಿಂಡ್‌ಶೀಲ್ಡ್ ಮುರಿಯಲು ಯತ್ನಿಸಿದ್ದರು.

ಘಟನೆಯ ದೃಶ್ಯಗಳನ್ನು ವ್ಯಕ್ತಿಯೋರ್ವರು ಟ್ವೀಟ್​ ಮಾಡಿದ್ದು ​ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿ ಮಾಡಲಾಗಿತ್ತು.

ಇದರ ಬೆನ್ನಲ್ಲೇ ವೈಟ್‌ಫೀಲ್ಡ್ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್