ವಾಟ್ಸಾಪ್ ಮೂಲಕ 1ರೂ.‌ಕಳುಹಿಸಿದ್ರೆ ಸಿಗಲಿದೆ 105 ಕ್ಯಾಶ್ ಬ್ಯಾಕ್; ವಾಟ್ಸಾಪ್ ಪೇ ನಿಂದ ಜನರಿಗೆ ಗುಡ್ ನ್ಯೂಸ್

ವಾಟ್ಸಾಪ್‌ ಪೇ ಬಳಸಿಕೊಂಡು ಹಣಕಾಸಿನ ಪಾವತಿಯನ್ನು ಮಾಡಿದರೆ ಭಾರತದಲ್ಲಿನ ಬಳಕೆದಾರರಿಗೆ ಸಂಸ್ಥೆಯು 105 ರೂ. ಕ್ಯಾಶ್‌ಬ್ಯಾಕ್‌ ನೀಡುವುದಾಗಿ ಘೋಷಿಸಿದೆ.

ಭಾರತದಲ್ಲಿ ಸಾಮಾನ್ಯವಾಗಿ ಗೂಗಲ್‌ ಪೇ, ಫೋನ್‌ ಪೇ ಹಾಗೂ ಪೇಟಿಎಂ ಆಪ್‌ಗಳು ಹೆಚ್ಚಾಗಿ ಬಳಕೆಯಲ್ಲಿವೆ.ಈ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯಲು ವಾಟ್ಸಾಪ್ ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಗೆ ಮುಂದಾಗಿದೆ.

ವಾಟ್ಸಾಪ್‌ ಪೇ ಆಯ್ದ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮುಂದಿನ ಮೂರು ಪಾವತಿಗಳಿಗೆ ತಲಾ 35 ರೂ. ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಉದಾಹರಣೆಗೆ, ಬಳಕೆದಾರರು ವಾಟ್ಸಾಪ್ ಪಾವತಿ ಮೂಲಕ 1 ರೂ. ಕಳುಹಿಸಿದರೂ 35 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು ಇದು ಸೀಮಿತ ಅವಧಿಯ ಆಫರ್ ಆಗಿದೆ.

ಟಾಪ್ ನ್ಯೂಸ್