ದಂಪತಿ & ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಪೊಲೀಸ್ ತನಿಖೆ ಆರಂಭ

ದಂಪತಿ & ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಪೊಲೀಸ್ ತನಿಖೆ ಆರಂಭ

ವಾಷಿಂಗ್ಟನ್; ಭಾರತೀಯ ಮೂಲದ ದಂಪತಿ ಮತ್ತು ಇಬ್ಬರು ಮಕ್ಕಳು ಅಮೆರಿಕದ ನ್ಯೂಜೆರ್ಸಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ತೇಜ್‌ಪ್ರತಾಪ್‌ ಸಿಂಗ್‌ ಹಾಗೂ ಸೋನಾಲ್‌ ಪರಿಹಾರ್‌ ದಂಪತಿ ನ್ಯೂಜೆರ್ಸಿಯ ಪ್ಲೇನ್ಸ್‌ಬೊರೋ ನಿವಾಸಿಗಳಾಗಿದ್ದು, ಐಟಿ ಉದ್ಯೋಗಿಗಳಾಗಿದ್ದ ಅವರಿಗೆ 10 ವರ್ಷದ ಮಗ ಹಾಗೂ 6 ವರ್ಷದ ಮಗಳಿದ್ದಳು.

ಕೆಲವು ವರ್ಷದ ಹಿಂದಷ್ಟೇ ಸ್ವಂತ ಮನೆಯನ್ನೂ ಖರೀದಿಸಿದ್ದರು.

ಅ.4ರಂದು ಸಂಬಂಧಿಕರ ಕರೆಗಳಿಗೂ ದಂಪತಿ ಉತ್ತರಿಸದಿದ್ದಾಗ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ಪರಿಶೀಲಿಸಿದಾಗ ಕುಟುಂಬದ ಸದಸ್ಯರೆಲ್ಲರ ಮೃತದೇಹಗಳು ಪತ್ತೆಯಾಗಿವೆ. ಆದರೆ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಇದೊಂದು ಕೊಲೆ ಪ್ರಕರಣವಾಗಿರುವ ಶಂಕೆಯಿದ್ದು ಪರಿಸರದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ಲೈನ್ಸ್‍ಬರೊ ಪೊಲೀಸ್ ಇಲಾಖೆಯ ಹೇಳಿಕೆಯಲ್ಲಿ ತಿಳಿಸಿದೆ.

ಟಾಪ್ ನ್ಯೂಸ್