ಜಾತಿ ನಿಂದನೆ ವಿರುದ್ಧ ದೂರು‌ ನೀಡಿದ್ದ ಯುವಕ ಆತ್ಮಹತ್ಯೆ

ಬೆಂಗಳೂರು;ಜಾತಿ ನಿಂದನೆ ವಿರುದ್ಧ ದೂರು‌ ನೀಡಿದ ಬೆನ್ನಲ್ಲೇ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉತ್ತರಪ್ರದೇಶ ಮೂಲದ ದಲಿತ ಯುವಕ ವಿವೇಕ್ ರಾಜ್ ಆತ್ಮಹತ್ಯೆ ಮಾಡಿಕೊಂಡವರು.ಉತ್ತರ ಪ್ರದೇಶದ ಕಪ್ತಂಗಂಜ್ ಬಸ್ತಿ ಮೂಲದ ವಿವೇಕ್ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದರು.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಸಹೋದ್ಯೋಗಿಗಳು ಜಾತಿ ನಿಂದನೆ ಮಾಡುತ್ತಿದ್ದಾರೆ ಎಂದು ಮಾರತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ವಿವೇಕ್ ಅವರ ಆತ್ಮಹತ್ಯೆ ಬೆನ್ನಲ್ಲೇ ಆಘಾತ ವ್ಯಕ್ತಪಡಿಸಿದ ಕಂಪೆನಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.

ವಿವೇಕ್ ದೂರು ಕೊಟ್ಟ ಕಾರಣ ಅವರ ಕಂಪೆನಿಯು ರಾಜೀನಾಮೆ ನೀಡುವಂತೆ ಹೇಳಿತ್ತು ಎನ್ನಲಾಗಿದೆ.ಇದಲ್ಲದೆ ಜಾತಿ ನಿಂದನೆ ಎದುರಿಸುತ್ತಿರುವ ಇಬ್ಬರು ಸಹೋದ್ಯೋಗಿಗಳು ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್