ವಿಟ್ಲ;ಆಟೋ ರಿಕ್ಷಾ ತಡೆದು ಹಲ್ಲೆ ಪ್ರಕರಣ, ಇಬ್ಬರ ಬಂಧನ

ಬಂಟ್ವಾಳ:ದಂಪತಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಲೆಕ್ಕಿ ಒಳಕ್ಕುಡ್ಡೆ ನಿವಾಸಿ ಸುದರ್ಶನ್ ಯಾನೇ ಮುನ್ನ ಮತ್ತು ಸಾಲೆತ್ತೂರು‌ ಗ್ರಾಮದ ಮೆದು ಕಟ್ಟತ್ತಿಲದ ಧನ್ ರಾಜ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಟ್ವಾಳ ತಾಲೂಕು ಸಾಲೆತ್ತೂರು‌ ಗ್ರಾಮದ ಪಾಲ್ತಾಜೆ ನಿವಾಸಿ ಸೀತಾರಾಮ ಪೂಜಾರಿರವರ ಪುತ್ರ ಜಯಂತರವರು ನೀಡಿದ‌ ದೂರಿನಂತೆ ಮುನ್ನ ಅಲಿಯಾಸ್ ಸುದರ್ಶನ, ಶರತ್‌, ಧನು, ಉದಯ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂ.25ರಂದು ರಾತ್ರಿ ಪತ್ನಿ ಮಗನ ಜೊತೆ ತೆರಳುವಾಗ
ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಗೆ ತಲುಪುತಿದ್ದಂತೆ ಸಾಲೆತ್ತೂರಿನ ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ಬಂದ ಸುದರ್ಶನ್,ಶರತ್,ಧನು ಮತ್ತು ಉದಯ ನಮ್ಮ ಆಟೋ ರಿಕ್ಷಾವನ್ನು ತಡೆದು‌ ನಿಲ್ಲಿಸಿ ನನ್ನ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ನಾನು ಅದನ್ನು ತಡೆಯಲು‌ ಹೋದಾಗ ನನ್ನ ಮೇಲೆ ತಂಡ ಹಲ್ಲೆ ನಡೆಸಿ ಬೆದರಿಕೆ ಹೊಡ್ಡಿದೆ ಎಂದು ದೂರು ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್