ವಿಟ್ಲ; ನಿಯಂತ್ರಣ ಕಳೆದುಕೊಂಡು ಮನೆಮೇಲೆ ಬಿದ್ದ ಪಿಕಪ್ ವಾಹನ, ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ವಿಟ್ಲ:ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು ಮಹಿಳೆ ಮನೆಯೊಳಗೆ ಸಿಲುಕಿಕೊಂಡ ಘಟನೆ
ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಘಟನೆಯಲ್ಲಿ ಮಹಿಳೆ ಮಹಿಳೆ ಗಂಭೀರವಾಗಿದ್ದಾರೆ ಎನ್ನಲಾಗಿದೆ.

ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ ಮನೆ ಸಂಪೂರ್ಣ ಹಾನಿಯಾಗಿದೆ. ಘಟನೆಯ ವೇಳೆ ಮನೆಯೊಳಗೆ ಮಹಿಳೆ ಮಲಗಿದ್ದರು ಎನ್ನಲಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ ಎಂದು ತಿಳಿದು ಬಂದಿದೆ.

ವಾಹನವನ್ನು ತೆರವು ಮಾಡದೆ ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಕಾರ್ಯಾಚರಣೆ ನಡೆಸುತ್ತಿದೆ.

ಟಾಪ್ ನ್ಯೂಸ್