ವಿಟ್ಲ; ಗ್ರಾನೈಟ್ ಲಾರಿ ಪಲ್ಟಿ ಪ್ರಕರಣ: ಗಂಭೀರವಾಗಿದ್ದ ನಾಲ್ವರಲ್ಲಿ ಓರ್ವ ಮೃತ್ಯು

ವಿಟ್ಲ; ಗ್ರಾನೈಟ್ ಲಾರಿ ಪಲ್ಟಿಯಾಗಿ ಓರ್ವ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಕರೋಪಾಡಿ ಗ್ರಾಮದ ಒಡಿಯೂರಿನಲ್ಲಿ ನಡೆದಿದೆ.

ಮೃತನಿಗೆ ಉತ್ತರ ಭಾರತದ ಮೂಲದ ಶುಭಾಶ್ಚಂದ್ರ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಹರ್ಷದ್, ಪವನ್ ಮತ್ತು ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.ಮೂವರಿಗೆ ಮಂಗಳೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾರ್ಬಲ್ ಅನ್ ಲೋಡ್ ಗಾಗಿ ಲಾರಿಯನ್ನು ರಿವರ್ಸ್ ತೆಗೆಯುವ ವೇಳೆ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಗಿ ನೀರಿನ ತೊಟ್ಟಿಗೆ ಬಿದ್ದು ಲಾರಿಯಲ್ಲಿದ್ದ ಕಾರ್ಮಿಕರ ಕೈಕಾಲು ಛಿದ್ರಗೊಂಡಿದೆ.

ಇನ್ನು ಗಾಯಾಳುಗಳನ್ನು ಕೂಡ ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್