ವಿಟ್ಲದಲ್ಲಿ ಕಾರು ಬೈಕ್ ಗಳ ನಡುವೆ ಸರಣಿ ಅಪಘಾತ

ವಿಟ್ಲ;ಸರಣಿ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಸ್ಪೈಸಿ ಹೊಟೇಲ್ ಬಳಿ ನಡೆದಿದೆ.

ಮೇಗಿನಪೇಟೆ ಶೋರೂಂ ಕಡೆಯಿಂದ ಬಂದ ಬೈಕ್ ಒಂದು ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಡಿಯೋ ವಾಹನಕ್ಕೆ ಢಿಕ್ಕಿ ಹೊಡೆದಿದೆ. ನಂತರ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಎರಡು ಕಾರು, ಒಂದು ಡಿಯೋ ಮತ್ತು ಬೈಕ್ ಜಖಂಗೊಂಡಿದೆ.ಗಾಯಗೊಂಡ ಬೈಕ್ ಸವಾರನಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಟಾಪ್ ನ್ಯೂಸ್