ವಿಟ್ಲ;ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಬ್ದುಲ್ ಅಜೀಜ್ ಎಂಬಾತನ ಮೇಲೆ ಅಬುಬಕ್ಕರ್ ಸಿದ್ದೀಕ್ ಎಂಬಾತನು ಚೂರಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಬುಬಕ್ಕರ್ ಸಿದ್ದೀಕ್ ಎಂಬಾತನು ಮಕ್ಕಳ ಎದುರು ಸಿಗರೇಟು ಸೇದಿದ್ದಕ್ಕೆ ಅಬ್ದುಲ್ ಅಜೀಜ್ ಆಕ್ಷೇಪಿಸಿದ್ದು ಇದೇ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.
ಭಾನುವಾರ ಅಬ್ದುಲ್ ಅಜೀಜ್ ಮನೆಯಲ್ಲಿರುವಾಗ ಕೇಪುಗ್ರಾಮದ ಅಡ್ಯನಡ್ಕ ಎಂಬಲ್ಲಿನ ಕರೀಂ ಎಂಬವರ ಚಿಕನ್‌ಸೆಂಟರ್ ಗೆ ಬರುವಂತೆ ಸಿದ್ದೀಕ್, ಅಬ್ದುಲ್ ಅಜೀಜ್ ಗೆ ಹೇಳಿದ್ದಾನೆ.
ಈ ವೇಳೆ ಬಂದ ಬಂದ ಅಜೀಜ್ ಗೆ ಅವಾಚ್ಯವಾಗಿ ನಿಂದಿಸಿ ಚಿಕನ್ ಸೆಂಟರ್ ನಿಂದ ಚೂರಿ ತಂದು ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.ಸಿಗರೇಟ್ ಸೇದಬಾರದೆಂದು ನನಗೆ ನೀನು ಬುದ್ದಿ ಹೇಳುತ್ತೀಯಾ ಎಂದು ಬೈದು ,ಚಿಕನ್ ಸೆಂಟರ್ ನಲ್ಲಿದ್ದ ಚೂರಿಯನ್ನು ಹಿಡಿದುಕೊಂಡು ಬಂದು ಸಿದ್ದೀಕ್ ಎದೆಯ ಕೆಳಗೆ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾನೆಂದು ಆರೋಪಿಸಲಾಗಿದೆ.
ಈ ವೇಳೆ ಅಲ್ಲೇ ಇದ್ದ ಇಶಾಮ್, ಕರೀಂ, ಜಲೀಲ್ ತಡೆದಿದ್ದಾರೆ.ಈ ವೇಳೆ ಸಿದ್ದೀಕ್ ಕೊಲೆ ಬೆದರಿಕೆ ಹಾಕಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಾಳು ಅಜೀಜ್ ಗೆ ಜಲೀಲ್ ವಿಟ್ಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಯ ಬಂಧನಕ್ಕೆ ಬಲೆ ಬೀಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.