ವಿಟ್ಲ; ಹಲ್ಲೆ ಆರೋಪ, ದೂರು, ಪ್ರತಿದೂರು ದಾಖಲು
ವಿಟ್ಲ;ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಯೋರ್ವ ಗ್ರಾಹಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದು, ಗ್ರಾಹಕ ಸಿಸಿಟಿವಿ ವೀಡಿಯೊ ಸಹಿತ ದೂರು ದಾರನ ವಿರುದ್ಧವೇ ವಿಟ್ಲ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ.
ಮೇಗಿನಪೇಟೆಯಲ್ಲಿ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ಸದಾನಂದ ಅವರು ಮೊದಲು ಪೊಲೀಸರಿಗೆ ದೂರು ನೀಡಿದ್ದಾರೆ.ಕಮರ್ಷಿಯಲ್ ಗ್ಯಾಸ್ ನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೊನ್ನೆ ಯಾಕೆ ಗ್ಯಾಸ್ ಹಾಕಿಲ್ಲವೆಂದು ಗಲಾಟೆ ನಡೆಸಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ.
ಇನ್ನು ಇನ್ನೊಂದು ದೂರಿನಲ್ಲಿ ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ ಸಮದ್ ಘಟನೆಯ ದೃಶ್ಯದ ಸಿಸಿಟಿವಿ ವೀಡಿಯೊ ಫುಟೇಜ್ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮ ಅಂಗಡಿಗೆ ಇಂಡಿಯನ್ ಗ್ಯಾಸ್ ಸಂಸ್ಥೆಯಲ್ಲಿ ಕಳೆದ ಒಂದು ವಾರದ ಹಿಂದೆ ಅನಿಲ ಪೂರೈಕೆ ಮಾಡಲು ತಿಳಿಸಿದ್ದು, ಪೂರೈಕೆ ಮಾಡಿಲ್ಲ.ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದಾಗ ಅದರ ಸಿಬ್ಬಂದಿ ಬಾಯಿಗೆ ಬಂದಂತೆ ಮಾತನಾಡಿ, ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇಂದು ಬೆಳಗ್ಗೆ ಅದರ ಚಾಲಕ ಏಕಾಏಕಿ ಪಿಕಪ್ ವಾಹನವನ್ನು ಅಂಗಡಿ ಬಳಿ ನುಗ್ಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಸಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.