ವಿಟ್ಲ:ಬೋರ್‌ವೆಲ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕಾಶಿಮಠದಲ್ಲಿ ನಡೆದಿದೆ.
ಉಕ್ಕುಡ ನಿವಾಸಿ ರಂಜಿತ್ ಮೃತ ದುರ್ದೈವಿ. ವಿಟ್ಲ ಕಡೆಯಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಬೋರ್‌ವೆಲ್ ಲಾರಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ಬಳಿಕ ಲಾರಿಯು ಬೈಕ್ ಸವಾರರನ್ನು ಕೆಲ ಮೀಟರುಗಳ ದೂರ ಎಳೆದೊಯ್ದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆಗೆ ಗಂಭೀರವಾದ ಗಾಯಗಳಾಗಿ ಮೃತಪಟ್ಟಿದ್ದಾರೆ.ಸಹಸವಾರನಿಗೂ ಗಾಯಗಳಾಗಿವೆ.
ಸ್ಥಳಕ್ಕ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.