ವಿಟ್ಲ; ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ; ಮನೆಯವರು ಮದುವೆಗೆ ಹೋಗಿದ್ದ ವೇಳೆ ಘಟನೆ!

ರಹೀಮ್ ಶಾನ್ ಮನೆಯಲ್ಲಿ ಕಳ್ಳತನ

ವಿಟ್ಲ;ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳ್ಳತನ ಮಾಡಿರುವ ಘಟನೆ ವಿಟ್ಲ ಸಮೀಪದ ಕಾಂತಡ್ಕದಲ್ಲಿ ನಡೆದಿದೆ.

ವಿಟ್ಲ ಕಾಂತಡ್ಕ ಶಾಲೆಯ ಸಮೀಪದ‌ ನಿವಾಸಿ ರಹೀಮ್ ಶಾನ್ ಅವರ ಮನೆಯಲ್ಲಿ ಅವರ ಕುಟುಂಬದ ಸದಸ್ಯರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು.‌ಮನೆಗೆ ಬರುವಾಗ ಸರಿಸುಮಾರು 12 ಗಂಟೆಯಾಗಿದೆ.

ಮನೆಗ ಬಂದು ನೋಡಿದಾಗ ಹಿಂಬದಿಯ ಬಾಗಿಲು ತೆರೆದಿರುವುದು ಕಂಡು ಬಂದಿದೆ.ರಾತ್ರಿ ಗಂಟೆ 8 ರಿಂದ 11 ಗಂಟೆಯ ಒಳಗೆ ಮನೆಗೆ ನುಗ್ಗಿದ ಕಳ್ಳರು ಸುಮಾರು ಹದಿನೈದು ಪವನ್ ಚಿನ್ನ ಹಾಗೂ ಒಂದು ಲಕ್ಷ ನಗದನ್ನು ದರೋಡೆ ‌ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಿಟ್ಲ ಪೋಲಿಸರು ಸ್ಥಳಕ್ಕೆ‌ ತೆರಳಿ ಪರಿಶೀಲನೆ‌ ನಡೆಸಿದ್ದಾರೆ.

ಟಾಪ್ ನ್ಯೂಸ್