ವಿಟ್ಲ;ಅನಂತಾಡಿ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಸಾವು ಪ್ರಕರಣ;ಆತ್ಮಹತ್ಯೆಗೆ ಕಾರಣ ಬಯಲು..

ವಿಟ್ಲ: ಕೊಡಾಜೆ ಅನಂತಾಡಿ ಗ್ರಾಮದಲ್ಲಿ ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ, ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಪ್ರತಾಪ್ (33)ರವರು ಮೃತಪಟ್ಟಿದ್ದಾರೆ‌‌.ಈ ಕುರಿತು ಪ್ರತಾಪ್ ಸಹೋದರ ಪ್ರದೀಪ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಪ್ರತಾಪ್‌ ತನ್ನ ಪತ್ನಿಯೊಂದಿಗೆ ವಾಸವಾಗಿದ್ದು, ಪತ್ನಿ ಬೇರೆ ವ್ಯಕ್ತಿಗೆ ಮೆಸೆಜ್‌ ಮಾಡುತ್ತಿದ್ದುದರಿಂದ ಗಂಡ-ಹೆಂಡಿತಿಯೊಳಗೆ ಜಗಳ ನಡೆದಿತ್ತು.

ಇದರಿಂದ ಜು.1 ರಂದು ಮನೆಯ ಊಟದ ಕೋಣೆಯ ಸಿಲಿಂಗ್‌ ಫ್ಯಾನಿಗೆ ನೈಲಾನ್‌ ಸಿರೇಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನಾಗಿ ಮಾಡಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ಪತಿ ನೇತಾಡುತ್ತಿರುವುದನ್ನು ಕಂಡ ಅವರ ಪತ್ನಿ ಇಸ್ತ್ರಿಪೆಟ್ಟಿಗೆಯ ವೈಯರ್‌ನ್ನು ಅದೇ ಫ್ಯಾನಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನು ಮಾಡಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಲು ಯತ್ನಿಸಿದ್ದಾರೆ‌.

ಸುದ್ದಿ ತಿಳಿದು ಸ್ಥಳೀಯರು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದಾಗ ಪ್ರತಾಪ ರವರು ಮೃತಪಟ್ಟಿದ್ದು ವೀಣಾರವರನ್ನು ಹೆಚ್ಚಿನ ಚಿಕಿತ್ಸೆಯಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ