ವಿಟ್ಲ; ಅಡ್ಯನಡ್ಕ ಸಭಾಭವನವೊಂದರಲ್ಲಿ ಸಂಘಟನೆ ಯೊಂದು ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ಹಿಂದೂ ಸಂಘಟನೆ ಆರೋಪಿಸಿ ಕೇಸ್ ದಾಖಲಿಸಿದೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ಮತ ಪ್ರವಚನ ಮಾಡಿದ್ದಾರೆಂದು ವಿದ್ಯಾರ್ಥಿಗಳನ್ನು ಹೊರಗೆ ಬನ್ನಿ ಎಂದು ಕರೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.ಮತ ಪ್ರವಚನ ನಡೆಸಿದೆ ಎನ್ನಲಾದ ಸಂಘಟನೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪರೀಕ್ಷೆಯನ್ನು ಹೇಗೆ ಎದುರಿಸುವುದು ಎಂದು ತರಬೇತಿಗಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು ಎನ್ನಲಾಗಿದೆ.ಇದಕ್ಕೆ ಸಂಘಪರಿವಾರ ವಿರೋಧಿಸಿದೆ.