ಮಂಗಳೂರು:ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕೇರಳ ಬಾಯಾರು ಬಳ್ಳೂರು ನಿವಾಸಿ ರಾಜ ಯಾನೆ ರಾಜೇಶ(26) ಬಂಧಿತ ಆರೋಪಿ.
ಸಂತ್ರಸ್ತೆ ಐದು ಮಂದಿಯ ಹೆಸರನ್ನು ಹೇಳಿದ್ದು, ಮೂರು ಮಂದಿಯನ್ನು ಭಾನುವಾರ ಬಂಧಿಸಿದ್ದು, ಓರ್ವನನ್ನು ಸೋಮವಾರ ಬಂಧಿಸಿದರೆ, ಮತ್ತೋರ್ವನಿಗೆ ನಿನ್ನೆ ಬಂಧಿಸಲಾಗಿದೆ.
ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು ಐದಕ್ಕೆ ಏರಿಕೆಯಾಗಿದೆ.