ವಿಟ್ಲ; ಜಾನುವಾರ ಸಾಗಾಟಗಾರರ ಮೇಲೆ ಹಲ್ಲೆ, ದೂರು ದಾಖಲು

ಬಂಟ್ವಾಳ:ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಬೈಕ್ ನಲ್ಲಿ ಬಂದ ಐವರು ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾತೂರು ಗ್ರಾಮ ಮಂಜೇಶ್ವರ ನಿವಾಸಿಯೋರ್ವರು ಹಲ್ಲೆಯಾದ ಬಗ್ಗೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.

ಸಾಲೆತ್ತೂರಿನ ನಿವಾಸಿಯೋರ್ವರು ಸೇರಿದಂತೆ ಒಟ್ಟು ನಾಲ್ಕು ಮಂದಿ ವಿಟ್ಲ ಸಮೀಪದ ಮುಳಿಯ ಎಂಬಲ್ಲಿಂದ ಜಾನುವಾರುಗಳಗಳನ್ನು ಖರೀದಿ ಮಾಡಿದ್ದಾರೆ.ಬಳಿಕ ಅದನ್ನು ಗೂಡ್ಸ್‌ ವಾಹನದಲ್ಲಿ ತುಂಬಿಸಿಕೊಂಡು, ಕಜೆ ಎಂಬಲ್ಲಿಗೆ ಸಾಗಿಸಲು ಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ.

ಈ ವೇಳೆ ಐವರ ತಂಡ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮೂರು ಮೋಟಾರು ಸೈಕಲ್ ಮತ್ತು ಒಂದು ಕಲ್ಲನ್ನು ರಸ್ತೆಗೆ ಅಡ್ಡವಾಗಿಟ್ಟು ಅಕ್ರಮ ಕೂಟ ರಚಿಸಿ ಗೂಡ್ಸ್‌ ವಾಹನದಲ್ಲಿದ್ದ ನಾಲ್ಕು ಜನರನ್ನು ಎಳೆದು ಹಾಕಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಟಾಪ್ ನ್ಯೂಸ್