ವಿಟ್ಲ; ಆಟೋ ರಿಕ್ಷಾ & ಕಾರಿನ ನಡುವೆ ಭೀಕರ ಅಪಘಾತ

ವಿಟ್ಲ:ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ.

ಸೂರಿಕುಮೇರ್ ನಿವಾಸಿ ಹನೀಪ್ ಗಾಯಗೊಂಡವರು.
ರಿಕ್ಷಾ ಸೂರಿಕುಮೇರ್ ನಿಂದ ಮಾಣಿ ಕಡೆಗೆ ಹಾಗೂ ಕಾರು ಮಂಗಳೂರು ಕಡೆಯಿಂದ ಪುತ್ತೂರಿಗೆ ಬರುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತವಾದ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್