ಬೆಳ್ತಂಗಡಿ; ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಬಸ್ ಬೆಳ್ತಂಗಡಿ ಪಡ್ಡಂದಡ್ಕ ಗಾಂಧೀನಗರ ತಿರುವಿನಲ್ಲಿ ಶುಕ್ರವಾರ ರಾತ್ರಿ ಪಲ್ಟಿಯಾಗಿ ಹಲವು ಮಂದಿಗೆ ಗಾಯಗಳಾಗಿವೆ.
ಬಸ್ಸು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.ಬಸ್ ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಹೋಗುವಾಗ ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ, ಗಾಂಧೀನಗರದ ನಡುವೆ ಅಪಘಾತಕ್ಕೀಡಾಗಿದೆ.
ಬಸ್ ನಲ್ಲಿ ಒಟ್ಟು 25ಕ್ಕೂ ಅಧಿಕ ಪ್ರಯಾಣಿಕರಿದ್ದರು. ಗಾಯಾಳುಗಳನ್ಜು ಆಸ್ಪತ್ರೆಗೆ ಸಾಗಿಸಲಾಗಿದೆ.
ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.