ದಾವಣಗೆರೆ;ಲಂಚ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಧ್ಯಂತರ ಜಾಮೀನಿನ ಬೆನ್ನಲ್ಲೆ ಪ್ರತ್ಯಕ್ಷವಾಗಿದ್ದಾರೆ.
ಇದರ ಬೆನ್ನಲ್ಲೆ ಅವರನ್ನು ಚೆನ್ನಗಿರಿಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ನಡೆಸಿದ್ದರು.ಈ ವೇಳೆ ಮೊದಲ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಲೋಕಾಯುಕ್ತಕ್ಕೆ ಸೂಕ್ತ ದಾಖಲೆ ನೀಡಿ ಹಣ ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ನಾನು ಭ್ರಷ್ಟಾಚಾರ ಮಾಡಿಲ್ಲ, ಯಾವುದೇ ತಪ್ಪು ಎಸಗಿಲ್ಲ, ಅದಕ್ಕಾಗಿ ಕೋರ್ಟ್ ನನಗೆ ಜಾಮೀನು ನೀಡಿದೆ.ಭ್ರಷ್ಟಾಚಾರ ಆರೋಪದಿಂದ ನನಗೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, 48 ಗಂಟೆಯೊಳಗೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಾನೆ.ನನ್ನನ್ನು ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ಮಾಹಿತಿಯಿಲ್ಲ, ಉಚ್ಚಾಟನೆ ಮಾಡಿದರೂ ನನಗೆ ಯಾವುದೇ ಬೇಸರವಿಲ್ಲ,ಯಾವುದೇ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಮನೆಯಲ್ಲಿ ಸಿಕ್ಕಿರುವ ಹಣ ಕ್ರಷರ್ ಹಾಗೂ ಅಡಿಕೆ ತೋಟದ ಹಣ.ಲೋಕಾಯುಕ್ತಕ್ಕೆ ಹಣದ ಎಲ್ಲಾ ಲೆಕ್ಕವನ್ನು ಕೊಡುತ್ತೇನೆ. ಕಚೇರಿಯಲ್ಲಿ ಯಾರೋ ಇಬ್ಬರು ಹಣ ತಂದಿಟ್ಟು ಓಡಿ ಹೋದರು. ನನ್ನ ಮಗ ಸುಮ್ಮನೆ ಕುಳಿತಿದ್ದ ಎಂದು ಹೇಳಿದ್ದಾರೆ.