ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯೆಯ ಪತಿ ಹೈದರ್ ಅಲಿ ನದಾಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿರುದ್ಧ ಜಲನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಗರದ ಶೇಖ್ ಅಹ್ಮದ್ ಸುನೇನ್‍ಸಾಬ್, ಎಸ್.ಎಸ್ ಖಾದ್ರಿ, ತನ್ವೀರ್‌ಪಿರ್, ಇಕ್ಬಾಲ್‍ಪೀರ್ ಪೀರ್‌ಜಾದ್, ವಾಜೀದ್‍ಪೀರ್ ಹಾಗೂ ಶಾನ್‍ವಾಜ್ ದಫೇದಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು.ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಹಾಡಹಗಲೇ ದುಷ್ಕರ್ಮಿಗಳು ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ಗುಂಡು ಹಾರಿಸಿ ಹೈದರ್ ಅಲಿ ನದಾಫ್ ಗೆ ಹತ್ಯೆಗೈದು ಪರಾರಿಯಾಗಿದ್ದರು.
ಮೃತನ ಪತ್ನಿ ನಿಶಾತ್ ಹೈದರ್ ನದಾಫ್ ಅವರು ವಿಜಯಪುರದ ವಾರ್ಡ್ ನಂಬರ್ 19ರ ಪಾಲಿಕೆ ಸದಸ್ಯೆಯಾಗಿದ್ದಾರೆ.