ಶಾಲೆಗೆ ಕುಡಿದು ಬಂದು ನಶೆಯಲ್ಲಿ ತೇಲಾಡಿದ ಶಿಕ್ಷಕ; ವಿದ್ಯಾರ್ಥಿಗಳು ಕಂಗಾಲು

ವಿಜಯಪುರ:ಶಿಕ್ಷಕನೋರ್ವ ಕುಡಿದ ಮತ್ತಿನಲ್ಲೇ ಬಂದು ಶಾಲೆಯಲ್ಲಿ ನಶೆಯಲ್ಲಿ ತೇಲಾಡುತ್ತಿದ್ದ. ಈತನಿಂದ ಬೇಸತ್ತ ಪೋಷಕರು ಇದೀಗ ಶಿಕ್ಷಕನ ವಿರುದ್ಧ ಸಿಡಿದೆದ್ದಿದ್ದಾರೆ.

ಕನ್ನೂರು‌ ಗ್ರಾಮದ ಬಾಲಕಿಯರ ಪ್ರೌಢಶಾಲೆಗೆ ಮದ್ಯಸೇವಿಸಿ ದೈಹಿಕ ಶಿಕ್ಷಕ ಬಿ.ಎಸ್.ರಾಠೋಡ​ ಎಂಬವರು ದಿನಾ ಬರುತ್ತಿದ್ದರು ಎನ್ನಲಾಗಿದೆ.

ಇದೀಗ ದೈಹಿಕ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿಡಿಪಿಐಗೆ ಶಾಲಾ ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ. ಶಿಕ್ಷಕನಿಗೆ ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್