ವಿಜಯಪುರ; ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ಅವರ ಪತಿ ಹೈದರ್ ಅಲಿ ನದಾಫ್ ಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ಹಾಡುಹಗಲೇ ಗುಂಡು ಹಾರಿಸಿ ರೌಡಿಶೀಟರ್ ಹೈದರ್ ಅಲಿ ನದಾಫ್ ಗೆ ಹತ್ಯೆ ಮಾಡಲಾಗಿದೆ.ಗುಂಡೇಟಿಗೆ ಸ್ಥಳದಲ್ಲಿಯೇ ಹೈದರ್ ಅಲಿ ನದಾಫ್ ಸಾವನ್ನಪ್ಪಿದ್ದಾರೆ. ಫೈರಿಂಗ್ ಮಾಡಿದ ತಕ್ಷಣವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಹಂತಕರು ಎರಡು ಕಾರು ಮತ್ತು ಬೈಕ್ ನಲ್ಲಿ ಪರಾರಿಯಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಜಯಪುರ ವಾರ್ಡ್ ನಂ 17ರ ಕಾರ್ಪೋರೆಟರ್ ಆಗಿರುವ ಹೈದರ್ ಪತ್ನಿ ನಿಶಾತ್ ಪಕ್ಷೇತರವಾಗಿ ಸ್ಪರ್ಧಿಸಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ವಿಜಯಪುರ ಎಸ್ಪಿ ಎಚ್‌ಡಿ ಆನಂದಕುಮಾರ ಈ ಕುರಿತು ಮಾಹಿತಿ ನೀಡಿದ್ದು,4ಕ್ಕಿಂತ ಹೆಚ್ಚು ಬಾರಿ ಹೈದರ್ ಅಲಿ ನದಾಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.ಅಲ್ಲದೇ, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.ಲೈಸೆನ್ಸ್ ಗನ್ ಮೂಲಕ ಹತ್ಯೆ ಮಾಡಿಲ್ಲ. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲು ಉಪಯೋಗವಾಗಿರಬೇಕು ಎಂದು ಹೇಳಿದ್ದಾರೆ.
ಈ ಹತ್ಯೆಗೆ ನಿಖರ ಕಾತರ ತಿಳಿದು ಬಂದಿಲ್ಲ. ಆದಷ್ಟು ಬೇಗನೆ ದುಷ್ಕರ್ಮಿಗಳನ್ನು ಬಂಧನ ಮಾಡಲಾಗುತ್ತದೆ ಎಂದಿದ್ದಾರೆ.