ವಿಜಯಪುರ; ಮೂವರು ಮಕ್ಕಳಿಗೆ ವಿಷವುಣಿಸಿ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ನಡೆದಿದೆ.
ಶಾಂತಾ ಹಾಗೂ ರಾಯಣ್ಣ ಮೃತ ಮಕ್ಕಳು.ಈ ಮಕ್ಕಳ ತಂದೆ ಭೀರಣ್ಣ, ಪತ್ನಿ ಮನೆ ಬಿಟ್ಟು ಹೋಗಿರುವುದಕ್ಕೆ ಮನನೊಂದು ಮೂವರು ಮಕ್ಕಳಿಗೆ ವಿಷಪ್ರಾಷನ ಮಾಡಿ ತಾನು ಸಹ ವಿಷ ಸೇವನೆ ಮಾಡಿದ್ದಾರೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಬೀರಣ್ಣ ಹಾಗೂ ಇನ್ನೋರ್ವ ಪುತ್ರ ಸಂಗಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.