ಭೀಕರ ಅಪಘಾತ; ಒಂದೇ ಮನೆಯ ಮೂವರು ದುರ್ಮರಣ

ವಿಜಯಪುರ:ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರದ ಕುಪಕಡ್ಡಿ ಬಳಿ ನಡೆದಿದೆ.

ಮೂರು ತಿಂಗಳ ಮಗು ಸೇರಿ ಅಪಘಾತದಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಮೂವರೂ ಮೃತಪಟ್ಟಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರದ ಕುಪಕಡ್ಡಿ ಬಳಿ ನಡೆದಿದೆ.
‌‌
ಮೃತರನ್ನು ಕಲಬುರ್ಗಿ ಮೂಲದ ಸುನಂದಾ ಮಲ್ಲಿಕಾರ್ಜುನ (25),ಮಗಳು ಸುಮನ ಮಲ್ಲಿಕಾರ್ಜುನ(3) ತಿಂಗಳು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರೆ,ಅದೇ ಕುಟುಂಬ ಶರಣಮ್ಮ ಬಸವರಾಜ ಕಲಶಟ್ಟಿ (55) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಉಮೇಶ, ಸುರೇಖಾ ಕಲಶಟ್ಟಿ ಇವರನ್ನು ತುರ್ತು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕೊಲ್ಹಾರ ಪಿಎಸ್‌ಐ ಪ್ರೀತಮ್ ನಾಯಕ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್