ಸ್ಪಂದನಾ ಅಗಲಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಪೋಸ್ಟ್ ಹಾಕಿದ ವಿಜಯ್ ರಾಘವೇಂದ್ರ; ಪತ್ನಿ ಕುರಿತ ಆ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

ಸ್ಪಂದನಾ ವಿಜಯ ರಾಘವೇಂದ್ರ ಅವರು ನಿಧನರಾಗಿ 11 ದಿನಗಳು ಕಳೆದಿದೆ.ಇದೀಗ ಪತ್ನಿಯ ನಿಧನದ ಬಳಿಕ ವಿಜಯ್‌ ರಾಘವೇಂದ್ರ ಮೊದಲ ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.

ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಪ್ರೇಮ ವಿವಾಹ.ತನ್ನ ಪ್ರೀತಿಯ ಮಡದಿ ಬಗ್ಗೆ ವಿಜಯ್ ರಾಘವೇಂದ್ರ ಅವರು ಬರೆಯುತ್ತಾ, ಸ್ಪಂದನ, ಹೆಸರಿಗೆ ತಕ್ಕ ಜೀವ,ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ,ಬದುಕಿಗೆ ತಕ್ಕ ನಡೆ, ನಮಗೆಂದೇ ಮಿಡಿದೆ ನಿನ್ನ ಹೃದಯವ,ನಿಲ್ಲದು ನಿನ್ನೊಂದಿಗಿನ ಕಲರವ,ನಾನೆಂದೂ ನಿನ್ನವ,ಕೇವಲ ನಿನ್ನವ..ಚಿನ್ನ ಎಂದು ಬರೆದಿದ್ದಾರೆ.

ಈ ರೀತಿ ಪತ್ನಿಯನ್ನು ನೆನೆದು ಸೋಷಿಯಲ್‌ ಮೀಡಿಯಾದಲ್ಲಿ ವಿಜಯ್‌ ಪೋಸ್ಟ್‌ ಹಾಕಿದ್ದಾರೆ.ವಿಜಯ್‌ ಅವರ ಈ ಬಾವುಕ ಪೋಸ್ಟ್‌ಗೆ ಸ್ನೇಹಿತರು ನೋವಿನಿಂದಲೇ ಸಾಂತ್ವನ ಹೇಳಿದ್ದಾರೆ‌.

ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅಲ್ಲಿನ ಹೋಟೆಲ್‌ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು.ಬೆಂಗಳೂರಿನ ನಿವಾಸದಲ್ಲಿ ಸ್ಪಂದನಾ ನಿಧನದ 11ನೇ ದಿನದ ಕಾರ್ಯವು ನಡೆದಿದೆ.

ಮಾಜಿ ಎಸಿಪಿ ಬಿಕೆ ಶಿವರಾಂ ಪುತ್ರಿಯಾಗಿದ್ದ ಸ್ಪಂದನಾ ನಿದನದಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿತ್ತು.ಸಣ್ಣ ವಯಸ್ಸಿನಲ್ಲೇ ಸ್ಪಂದನಾ ನಿಧನಕ್ಕೆ ಕನ್ನಡಿಗರು ಕಂಬನಿ ಮಿಡಿದಿದ್ದರು.

ಟಾಪ್ ನ್ಯೂಸ್