ತರಕಾರಿ ವ್ಯಾಪಾರಿಯ ಬ್ಯಾಂಕ್ ಖಾತೆಗೆ ಬರೋಬ್ಬರಿ 172 ಕೋಟಿ ರೂ. ವರ್ಗಾವಣೆಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗಾಜಿಪುರ ಜಿಲ್ಲೆಯ ವಿಜಯ್ ರಸ್ತೋಗಿ ಎಂಬವರ ಹೆಸರಿನ ಬ್ಯಾಂಕ್ ಖಾತೆಗೆ 172 ಕೋಟಿ ಹಣ ಜಮೆ ಆಗಿದೆ.ಈ ಕುರಿತಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಣ ವಿಜಯ್ ರಸ್ತೋಗಿ ಅವರ ಖಾತೆಗೆ ಹೇಗೆ ಜಮೆಯಾಯಿತು ಎಂಬುದರ ಕುರಿತಾಗಿ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ.ಐಟಿ ಅಧಿಕಾರಿಗಳ ತನಿಖೆಯಿಂದ ವಿಜಯ್ ಗೆ ಕೂಡ ಗಾಬರಿಯಾಗಿದೆ. ಅವರು ತಮ್ಮ ದಾಖಲೆ ಯಾರೋ ಕದ್ದಾಲಿಕೆ ಮಾಡಿ ಖಾತೆ ತೆರೆದಿರಬೇಕು ಎಂದು ಹೇಳುತ್ತಿದ್ದಾರೆ.ಆ ಬ್ಯಾಂಕ್ ಖಾತೆ ನಾನು ತೆರೆದಿಲ್ಲ ಎಂದು ಹೇಳಿದ್ದಾರೆ.
ಡಿಜಿಟಲ್ ವರ್ಗಾವಣೆಯಿಂದಾಗಿ ಈ ಪ್ರಮಾಣದ ಹಣ ವರ್ಗಾವಣೆಯಾಗಿರುವ ಸಾಧ್ಯತೆ ಇದೆ.ಹಾಗಾಗಿ ಈ ಕುರಿತು ಸೈಬರ್ ಸೆಲ್‌ನಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.