ವಯಾಗ್ರ ಮಾತ್ರೆ ಸೇವಿಸಿ ನಿರಂತರ ಲೈಂಗಿಕ ಕ್ರಿಯೆ ನಡೆಸಿದ ವೃದ್ಧ; ಸ್ಥಿತಿ ಗಂಭೀರ, ಐಸಿಯು ನಲ್ಲಿ ಚಿಕಿತ್ಸೆ!

ಲೈಂಗಿಕ ತೃಪ್ತಿಗಾಗಿ ಹಲವು ರೀತಿಯ ಕಸರತ್ತು ಮಾಡಿದ ವೃದ್ಧನೋರ್ವ ವಯಗ್ರಾ ಸೇವಿಸಿ 24 ಗಂಟೆ ಸೆಕ್ಸ್ ನಲ್ಲಿ ತೊಡಗಿ ಆಸ್ಪತ್ರೆಗೆ ಪಾಲಾಗಿದ್ದು, ಈ ಸುದ್ದಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗಿದೆ.

ಜರ್ಮನಿಯ ನಿವಾಸಿ ಇಟಲಿ ಪ್ರವಾಸದಲ್ಲಿದ್ದ.ಈ 50ರ ಹರೆಯದವನಾಗಿದ್ದು ತನ್ನ ಖಾಸಗಿ ಅಂಗ ನಿಮಿರುವಿಕೆಗಾಗಿ ವಯಾಗ್ರ ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಸೆಕ್ಸ್‌ನಲ್ಲಿ ತೊಡಗಿದ್ದಾನೆ.

ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ.ನಂತರ ನೋವು ತೀವ್ರವಾಗಿದೆ, ಇದರಿಂದ ಗಾಬರಿಯಾಗೊಂಡ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನು ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ನಿರಂತರ ಸಂಭೋಗದಿಂದ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇಟಲಿಯ ಗ್ರೊಸೆಟೊ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಈಗ ಈತ ಚಿಕಿತ್ಸೆ ಪಡೆಯುತ್ತಿದ್ದಾನೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ.

ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಸಂತ್ರಸ್ತ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com