ಜೈಶ್ರೀರಾಂ ಘೋಷಣೆ ಕೂಗಿ ಮಝರ್ ಗಳ ಧ್ವಂಸ

ಜೈಶ್ರೀರಾಂ ಘೋಷಣೆ ಕೂಗಿ ಮಝರ್ ಗಳ ಧ್ವಂಸ

ಉತ್ತರಾಖಂಡ; ಋಷಿಕೇಶದ ಅಮಿತ ಗ್ರಾಮ ಪ್ರದೇಶದಲ್ಲಿ ಎರಡು ಮಝರ್‌ಗಳನ್ನು ಸುತ್ತಿಗೆಗಳು ಮತ್ತು ಜೆಸಿಬಿಗಳನ್ನು ಬಳಸಿ ಧ್ವಂಸಗೊಳಿಸಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೈಶ್ರೀರಾಂ ಘೋಷಣೆಗಳನ್ನು ಕೂಗುತ್ತಾ ಇಬ್ಬರು ಯುವಕರು ಸುತ್ತಿಗೆಗಳನ್ನು ಬಳಸಿ ಮಝರ್‌ನ್ನು ಧ್ವಂಸ ಮಾಡಿದ್ದಾರೆ. ಬಳಿಕ ಧ್ವಂಸಮಾಡಿದ ಮಝರ್‌ನ ಅವಶೇಷಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವುದು ಕಂಡು ಬಂದಿದೆ.

ಇದೇ ವೇಳೆ ಅಕ್ರಮ ಮಝರ್‌ಗಳು ಎಲ್ಲಿದೆಯೋ ಅಲ್ಲೆಲ್ಲ ಧ್ವಂಸ ಮಾಡುತ್ತೇವೆ. ಇದು ದೇವಭೂಮಿ, ಮಝರ್ ಭೂಮಿ ಅಲ್ಲ ಎಂದು ದುಷ್ಕರ್ಮಿ ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಝರ್‌ನ್ನು ಧ್ವಂಸಗೊಳಿಸಿದ ದೇವಭೂಮಿ ರಕ್ಷಾ ಅಭಿಯಾನದ ಅಧ್ಯಕ್ಷ ನಮಗೆ ಮಝರ್‌ಗಳನ್ನು ಧ್ವಂಸ ಮಾಡಲು ಆ ಭೂಮಿಯ ಮಾಲಕ ಅನುಮತಿ ನೀಡಿದ್ದ ಎಂದು ಹೇಳಿದ್ದಾರೆ.

ಮಜರ್‌ಗಳನ್ನು ನಿರ್ಮಿಸಿದ್ದ ಭೂಮಿ ಇಬ್ಬರು ಹಿಂದೂಗಳಿಗೆ ಸೇರಿದೆ. ಅವುಗಳನ್ನು ಕೆಡವಲು ಅವರು ನಮಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್