ಮಂಗಳೂರು;ಕರಾವಳಿಯಲ್ಲಿ ಎಸ್ ಡಿಪಿಐ ಸ್ಪರ್ಧೆಯಿಂದ ಕಾಂಗ್ರೆಸ್ ಮೇಲೆ ಏನೂ ಪರಿಣಾಮ ಬೀರುವುದಿಲ್ಲ. ಜನರು ಎಸ್ ಡಿಪಿಐ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಯುಟಿ ಖಾದರ್, ನಮ್ಮ ಮತ ಬ್ಯಾಂಕಿಗೆ ಎಸ್‌ಡಿಪಿಐನಿಂದ ಯಾವುದೇ ಧಕ್ಕೆಯಾಗುವುದಿಲ್ಲ. ಕೋಮುವಾದಿ ಕಾರ್ಯಸೂಚಿಯನ್ನು ಜನತೆ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಎಸ್‌ಡಿಪಿಐ ಕಾಂಗ್ರೆಸ್ ಮತ ಬ್ಯಾಂಕ್ ನ್ನು ವಿಭಜಿಸುವುದಿಲ್ಲ.ಎಸ್ ಡಿಪಿಐಗೆ ದಕ್ಷಿಣ ಕನ್ನಡದಲ್ಲಿ ಸೀಮಿತ ಪ್ರಭಾವ ಮಾತ್ರ ಇದೆ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಈಗ ರಾಜ್ಯದಲ್ಲಿ ಅಂತ್ಯದ ಹಾದಿಯಲ್ಲಿದೆ.ಅವರನ್ನು ರಕ್ಷಿಸುವ ಕರ್ತವ್ಯವನ್ನು ಎಸ್‌ಡಿಪಿಐ ಮಾಡುತ್ತಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಎರಡೂ ಪಕ್ಷಗಳ ಕೋಮು ರಾಜಕಾರಣವನ್ನು ವಿರೋಧಿಸುತ್ತದೆ ಎಂದು ಎಂದಿದ್ದಾರೆ.
ಕರಾವಳಿಯಲ್ಲಿ ಎಸ್‌ಡಿಪಿಐ ಪಕ್ಷದ ಶೇಕಡ 2-3 ಮತ ಗಳಿಕೆ ಪ್ರಮಾಣದಿಂದ ಚುನಾವಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.ಎಸ್ ಡಿಪಿಐ ಈ ಮೊದಲು ಸ್ಪರ್ಧಿಸಿದ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದ್ದಾರೆ.
ಮಂಗಳೂರು ಕ್ಷೇತ್ರದಿಂದ ಯುಟಿ ಖಾದರ್ ಎದುರಾಗಿ ಎಸ್ ಡಿಪಿಐ ನಿಂದ ರಿಯಾಝ್ ಫರಂಗಿಪೇಟೆ ಸ್ಪರ್ಧಿಸಿದ್ದಾರೆ.
ಮುಸ್ಲಿಮರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕೂಡ ನಡೆಸುತ್ತಿದ್ದಾರೆ.ಇದು ಈ ಬಾರಿ ಕಾಂಗ್ರೆಸ್ ಮತ ಬ್ಯಾಂಕ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕೂಡ ಇದೆ.