ಮಂಗಳೂರು;ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವಿನ ಮೂಲಕ ಬಹು ಮತವನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಬಹುಮತದ ಬಳಿಕ ಮುಖ್ಯಮಂತ್ರಿ, ಸಚಿವರು ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ.ಇದರ ಜೊತೆಗೆ ಹಲವು ಆಕಾಂಕ್ಷಿಗಳು ಲಾಬಿಯನ್ನು ಕೂಡ ನಡೆಸುತ್ತಿದ್ದಾರೆ.ಒಕ್ಕಲಿಗ, ಲಿಂಗಾಯುತ, ದಲಿತ ಸಮುದಾಯದ ಮುಖಂಡರು ನಾಯಕರು ತಮ್ಮ ಸಮುದಾಯಕ್ಕೆ ಸಚಿವ ಸ್ಥಾನಾಗಳಿಗೆ ಲಾಬಿ ನಡೆಸುತ್ತಿದ್ದಾರೆ.
ಈ ಬಾರಿ ಮುಸ್ಲಿಂ ಸಮಹದಾಯದಿಂದ 9 ಮಂದಿ ಶಾಸಕರು ವಿಧಾನಸಭೆಗೆ ಪ್ರವೇಶಿಸಿದ್ದಾರೆ.ಶಾಸಕಿ ಖನೀಝಾ ಫಾತಿಮಾ ಮತ್ತು 8 ಮಂದಿ ಪುರುಷ ಶಾಸಕರು ವಿಧಾನ ಸೌಧ ಪ್ರವೇಶಿದ್ದಾರೆ.
ಈ ಬಾರಿ ಮುಸ್ಲಿಂ ಸಮುದಾಯದ ಮತ ಕಾಂಗ್ರೆಸ್ ಗೆ ಅತ್ಯಧಿಕವಾಗಿ ಬಿದ್ದಿದೆ.ಇದರಿಂದ ಸಮುದಾಯಕ್ಕೆ ಮುಖ್ಯ ಸ್ಥಾನಮಾನ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಹಿರಿಯ ಐದು ಬಾರಿ ಶಾಸಕರಾದ ಯುಟಿ ಖಾದರ್,ಹಿರಿಯ ಶಾಸಕ ತನ್ವೀರ್ ಸೇಠ್, ಎನ್.ಎ ಹಾರಿಸ್, ರಿಝ್ವಾನ್ ಹರ್ಷದ್ ಅವರಲ್ಲಿ ಯಾರಿಗಾದರೂ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ.
ಇನ್ನು ಇದರ ಬೆನ್ನಲ್ಲೇ ಖಾದರ್ ಅವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಗೃಹಮಂತ್ರಿಯನ್ನಾಗಿ ಮಾಡಬೇಕು ಎಂದು ರಾಜ್ಯದ ಕಾಂಗ್ರೆಸ್ ಮುಖಂಡರನ್ನು ಉಳ್ಳಾಲದ ಜನರ ಪರವಾಗಿ ದರ್ಗಾದ ಅಧ್ಯಕ್ಷರಾದ
ಬಿ.ಜಿ ಹನೀಫ್ ಆಗ್ರಹಿಸಿದ್ದಾರೆ.
ಯು.ಟಿ ಖಾದರ್ ಅವರು ಐದನೇ ಬಾರಿ ಮತದಿಂದ ಆಯ್ಕೆಗೊಂಡಿದ್ದಾರೆ.ಎರಡು ಬಾರಿ ಖಾದರ್ ಅವರು ಮಂತ್ರಿಯಾದರು.ಆ ವೇಳೆ ಅವರು ಮಾಡಿದ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಬೇಕೆಂದು ಆಗ್ರಹ ಕೇಳಿ ಬಂದಿದೆ.
ಇನ್ನು ಈವರೆಗೂ ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿ ಗೃಹಮಂತ್ರಿಯಾಗಿಲ್ಲ. 88% ಜನ ಕಾಂಗ್ರೆಸ್ಸಿಗೆ ಬೆಂಬಲಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಮುಖಂಡರು ಕನಿಷ್ಠ ಯು.ಟಿ ಖಾದರ್ ಅವರನ್ನು ಗೃಹಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂದು ಉಳ್ಳಾಲ ಜಮಾಅತ್ ಪರವಾಗಿ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇಬ್ಬರು ಮಕ್ಕಳು ಸಮುದ್ರಪಾಲು
ವಿಶಾಖಪಟ್ಟಣಂ;ಫಿಶಿಂಗ್ ಹಾರ್ಬರ್ ಬೀಚ್‌ನಲ್ಲಿ ಇಬ್ಬರು ಮಕ್ಕಳು ಈಜಲು ಹೋಗಿ ನೀರುಪಾಲಾದ ದಾರುಣ ಘಟನೆ ನಡೆದಿದೆ.
ಮೃತರನ್ನು ದಲೈ ಇಶಾಂತ್ (14) ಮತ್ತು ಸತ್ಯ ಶ್ಯಾಮ ಕುಮಾರ್ (15) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಗಂಗಮ್ಮ ತಳ್ಳಿ ದೇವಸ್ಥಾನದ ಬಳಿಯ ಮೀನುಗಾರಿಕಾ ಬಂದರಿನ ಬೀಚ್‌ಗೆ ಮೂವರು ಮಕ್ಕಳು ಈಜಲು ಹೋಗಿದ್ದು, ಸಮುದ್ರ ತೀರದಲ್ಲಿ ಭಾರಿ ಅಲೆಗಳಿದ್ದ ಕಾರಣ ಇಬ್ಬರು ಅಲೆಗಳಿಗೆ ಸಿಲುಕಿ ಸಾವನ್ನದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಲೈ ಇಶಾಂತ್ ಸ್ಥಳದಲ್ಲೇ ಮೃತಪಟ್ಟರೆ, ಸತ್ಯ ಶ್ಯಾಮ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.