ನವದೆಹಲಿ;2022ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತಹ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಯುಪಿಎಸ್ಸಿ ಸಿಎಸ್‌ಇ ಫಲಿತಾಂಶ 2023ರಲ್ಲಿ ಇಶಿತಾ ಕಿಶೋರ್ ಎಐಆರ್ ದೇಶಕ್ಕೆ ಮೊದಲ ರ್ಯಾಂಕ್ ಪಡೆದ್ದಾರೆ.ಗರಿಮಾ ಲೋಹಿಯಾ ಮತ್ತು ಉಮಾ ಹರಥಿ ಎನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದ್ದಾರೆ.ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಮಹಿಳಾ ಅಭ್ಯರ್ಥಿಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.
ಈ ಬಾರಿ ಕರ್ನಾಟಕದ 25 ಮಂದಿ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಹೆಚ್ ಎಸ್ ಭಾವನಾ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಇತರ ಕೇಂದ್ರ ಸೇವೆಗಳ ಗ್ರೂಪ್ ಎ, ಬಿ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ವಾರ್ಷಿಕವಾಗಿ ಪ್ರಿಲಿಮ್ಸ್, ಮುಖ್ಯ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.
2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ 25 ಮಂದಿ ಪಾಸ್ ಮಾಡಿ ಆಯ್ಕೆಯಾಗಿದ್ದಾರೆ. ಅವರಲ್ಲಿ ಹೆಚ್ ಎಸ್ ಭಾವನ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹೆಚ್ ಎಸ್ ಭಾವನ 55ನೇ Rankನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಡೆದುಕೊಂಡಿದ್ದಾರೆ.
ಡಿ ಸೂರಜ್ 197, ರವಿರಾಜ್ ಆವಸ್ಥಿ 224, ಚಲುವರಾಜ್ 238, ಧಾಮಿನಿ ಎನ್ ದಾಸ್ 345, ಟಿ ಕೈಲಾಶ್ 465, ಬಿವಿ ಶ್ರೀದೇವಿ 525, ಆರ್ ರಾಹುಲ್ 582, ಕೆ ಸೌರಭ್ 26, ಶ್ರುತಿ ಯರಗಟ್ಟಿ 364, ಎಂ ಪೂಜಾ 390, ಬಿ ಎಸ್ ಧನುಷ್ ಕುಮಾರ್ 501, ಆದಿನಾಥ್ ಪದ್ಮಣ್ಣ 566, ಸಿದ್ದಲಿಂಗಪ್ಪ ಕೆ ಪೂಜಾರ್ 589, ವರುಣ್ ಕೆ ಗೌಡ 594, ಐ ಎನ್ ಮೇಘನಾ 617, ಸಿಪಿ ನಿಮಿಷಾಂಬ 659, ಮೊಹಮ್ಮದ್ ಸಿದ್ಧಿಕ್ 745, ಹೆಚ್ ಎಸ್ ಪದ್ಮನಾಭ 923 ಸೇರಿದಂತೆ 25 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಆಯ್ಕೆಯಾಗಿದ್ದಾರೆ.