ಉಪ್ಪಿನಂಗಡಿ;ಸ್ಕೂಟರ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಲ್ಲೇರಿ ಬಳಿ ನಡೆದಿದೆ.
ಕಳಂಜಿ ಬೈಲು ನಿವಾಸಿ ಜಾಫರ್ ಮೃತರು.ಈದ್ ಹಬ್ಬದ ಹಿನ್ನೆಲೆ ನೆಂಟರ ಮನೆಗೆ ಮಕ್ಕಳ ಜೊತೆ ತೆರಳುವಾಗ ರಾಂಗ್ ಸೈಡ್ ನಿಂದ ಬಂದ ಕಾರು ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಮಕ್ಕಳಿಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.