ಉಪ್ಪಿನಂಗಡಿ; ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ, ಇಬ್ಬರ ಬಂಧನ

ಉಪ್ಪಿನಂಗಡಿ;ಮನೆಗೆ ನುಗ್ಗಿ ಬಾಲಕಿಗೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಕಡಬ ಕೊಯಿಲ ಗ್ರಾಮದ ನಿವಾಸಿಗಳಾದ ಹಸೈನಾರ್ (24) ಹಾಗೂ ಅಬ್ಬಾಸ್ (30) ಬಂಧಿತ ಆರೋಪಿಗಳು.

ಇವರು ಮರ ತುಂಡರಿಸುವ ಕೆಲಸದ ನಿಮಿತ್ತ ಕರಾಯ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು.ನೀರು ಕೇಳುವ ನೆಪದಲ್ಲಿ ಸಂತ್ರಸ್ತ ಬಾಲಕಿಯ ಮನೆಗೆ ಹೋಗಿದ್ದರು.ಮನೆಯಲ್ಲಿನ
ಸ್ಥಿತಿಗತಿ ಗಮನಸಿದ ಹಸೈನಾರ್ ಶುಕ್ರವಾರ ಸಂಜೆ ಸಂತ್ರಸ್ತೆಯ ಮನೆಗೆ ಬಂದು ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿ ಈ ನಂಬರಿಗೆ ಫೋನ್ ಮಾಡು ಎಂದು ಬೆದರಿಕೆ ಹಾಕಿ ಹೋಗಿದ್ದ ಎನ್ನಲಾಗಿದೆ.

ಮರು ದಿನ ರಾತ್ರಿ 8 ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಅಬ್ಬಾಸ್ ಎಂಬಾತನೊಂದಿಗೆ ಬಂದ ಆರೋಪಿಯು ಮನೆಯ ಒಳಗೆ ಪ್ರವೇಶ ಮಾಡಿ, ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com