ಉಪ್ಪಿನಂಗಡಿ; ಮಗಳ ಮದುವೆಗೆ ಚಿನ್ನ ಖರೀದಿಸಲು ಹೋಗುವಾಗ 10 ಲಕ್ಷ ರೂ.ದೋಚಿ ಪರಾರಿಯಾದ ಪ್ರಕರಣ, ಓರ್ವನ ಬಂಧನ

ಉಪ್ಪಿನಂಗಡಿ; ಮಗಳ ವಿವಾಹಕ್ಕೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಯರ್ಪಾಡಿ ನಿವಾಸಿ ಮೊಹಮ್ಮದ್ ಅವರಿಂದ 10 ಲಕ್ಷ ರೂ.ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ಮುಸ್ತಫಾ (41)ಎಂಬಾತನನ್ನು ಬಂಧಿಸಿದ್ದಾರೆ.ಆತನಿಂದ ಎರಡು 9 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ.ಈ ಪ್ರಕರಣದ ಇನ್ನೋರ್ವ ಆರೋಪಿ ಒಂದು ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸೋಮವಾರ ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಿಫಾಯಿನಗರ ರಸ್ತೆಯಲ್ಲಿ ಈ ಪ್ರಕರಣ ಸಂಭವಿಸಿದೆ. ಕಾಯರ್ಪಾಡಿ ನಿವಾಸಿ ಮಹಮ್ಮದ್ ಪತ್ನಿ ಜೊತೆ ಮಗಳ ಮದುವೆಗೆ ಚಿನ್ನ ಖರೀದಿಸಲು ಹತ್ತು ಲಕ್ಷ ರೂ.ಹಣವನ್ನು ತೆಗೆದುಕೊಂಡು ಉಪ್ಪಿನಂಗಡಿಯ ಜ್ಯುವೆಲ್ಲರಿಗೆ ಹೋಗುವಾಗ ಹಣ ದೋಚಿ ಪರಾರಿಯಾದ ಪ್ರಕರಣ ನಡೆದಿತ್ತು.

ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಮೊಹಮ್ಮದ್ ಕೇಸ್ ದಾಖಲಿಸಿದ್ದರು.ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಓರ್ವನಿಗೆ ಬಂಧಿಸಿದ್ದಾರೆ.

ಟಾಪ್ ನ್ಯೂಸ್