ಉಪ್ಪಳ; ಸ್ಕೂಟರ್ ಗೆ ಬಸ್ ಢಿಕ್ಕಿ ಹೊಡೆದು ಭೀಕರ ಅಪಘಾತ; ಗಾಯಾಳು ಯುವಕ ಮೃತ್ಯು

ಕಾಸರಗೋಡು: ಸ್ಕೂಟರ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ

ಕಾಸರಗೋಡಿನ ಉಪ್ಪಳ ಸೋಂಗಲ್ ಬದರಿಯಾ ಜುಮಾ ಮಸೀದಿ ವ್ಯಾಪ್ತಿಯ ಮಹಮ್ಮದ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್(21) ಮೃತ ಯುವಕ.

ಇಬ್ರಾಹಿಂ ಖಲೀಲ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು,ಮಂಗಳೂರಿನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ.

ಭಾನುವಾರ ರಾತ್ರಿ 8 ಗಂಟೆಗೆ ಸೀತಾಂಗೋಳಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಖಲೀಲ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.ಖಲೀಲ್ ಮತ್ತು ಮೊಹಮ್ಮದ್ ಮಹಸಿಲ್ ಗಂಭೀರವಾಗಿದ್ದರು.ಈ ಪೈಕಿ ಮಹಸಿಲ್ ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮಹ್ಸಿಲ್ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಹ್ಮೂದ್ ಅವರ ಪುತ್ರರಾಗಿದ್ದು ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್